ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಲೇ ಇರಬೇಕು, ಅದಕ್ಕಾಗಿ ಹೊಸ ಹೊಸ ಫೋಟೊಗಳನ್ನು, ಶಾರ್ಟ್ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಲೇ ಇರಬೇಕು ಎಂಬ ಖಯಾಲಿ ಯುವಜನರಲ್ಲಿ ಬಹಳ ಹೆಚ್ಚಳವಾಗಿದೆ.
ಏಳುವುದು, ಹಲ್ಲು ಉಜ್ಜುವುದು, ತಿಂಡಿ ತಿನ್ನುವುದು, ಸ್ನಾನ ಮಾಡುವುದು, ಆಟ -ಪಾಠ, ಸ್ನೇಹಿತರೊಂದಿಗೆ ಸುತ್ತಾಟ, ನೆಂಟರೊಂದಿಗೆ ಭೇಟಿ ಸೇರಿದಂತೆ ಶೌಚಾಲಯಕ್ಕೆ ಹೋಗುವುದನ್ನು ಬಿಟ್ಟು ಉಳಿದೆಲ್ಲ ಫೋಟೊ, ಸ್ಟೇಟಸ್, ವಿಡಿಯೊಗಳು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಶಾರ್ಟ್ ವಿಡಿಯೊಗಳಾಗಿ ಹರಿದಾಡುತ್ತಿರುತ್ತದೆ.
ಮತ್ತೊಮ್ಮೆ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿದ ಚಿರತೆ
ಇಂಥದ್ದೇ ಒಂದು ಇನ್‌ಸ್ಟಾಗ್ರಾಂ ವಿಡಿಯೊ ಹುಚ್ಚಿಗೆ ಬಿದ್ದ ಗುಜರಾತಿನ ಬಾಲಕನೊಬ್ಬ, ವಿದ್ಯುತ್ ಸ್ಪರ್ಶದಿಂದ ಹೆಣವಾಗಿದ್ದಾನೆ. 15 ವರ್ಷದ ಪ್ರೇಮ್ ಪಂಚಲ್ ಎಂಬ ಹೈಸ್ಕೂಲ್ ವಿದ್ಯಾರ್ಥಿಯು ಗುಜರಾತಿನ ಅಹಮದಾಬಾದ್‌ನಲ್ಲಿ ಗೂಡ್ಸ್ ರೈಲು ಏರಿದ್ದಾನೆ. ಅದರ ಮೇಲಿಂದ ಇನ್‌ಸ್ಟಾಗ್ರಾಂ ವಿಡಿಯೊ ರೆಕಾರ್ಡ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ರೈಲಿನ ಬೋಗಿ ಮೇಲಿದ್ದ ಎಲೆಕ್ಟ್ರಿಕ್ ತಂತಿಯ ಸ್ಪರ್ಶವಾಗಿ, ಹೈವೋಲ್ಟೇಜ್ ವಿದ್ಯುತ್‌ಗೆ ಬಲಿಯಾಗಿದ್ದಾನೆ.
ಯಾವ ಮಟ್ಟಿಗೆ ಕರೆಂಟ್ ಶಾಕ್ ಹೊಡೆದಿದೆ ಎಂದರೆ, ಪ್ರೇಮ್‌ನ ಶವವನ್ನು ವಿದ್ಯುತ್ ಸಂಪರ್ಕವು ಬೋಗಿ ಮೇಲಿಂದ ಕಿತ್ತೊಗೆದು ಕೆಳಕ್ಕೆ ಬೀಳಿಸಿದೆ. ಆತ ವಿದ್ಯುತ್ ಶಾಕ್‌ಗೆ ಮೃತಪಡದಿದ್ದರೂ, ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಹೆಣವಾಗಿರುವುದು ನಿಶ್ಚಿತ ಎಂದು ಪ್ರತ್ಯಕ್ಷದರ್ಶಿ ರೈಲ್ವೆ ಸಿಬ್ಬಂದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಪಘಾತದಲ್ಲಿ ಸಾವು ಎಂದು ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಬಾಲಕನ ಪೋಷಕರಿಗೆ ಹಸ್ತಾಂತರಿಸಿದ್ದಾರೆ.