alex Certify ಮೌಂಟ್ ಎವರೆಸ್ಟ್ ಏರಿದ ವೈದ್ಯ ದಂಪತಿಯಿಂದ ಹೊಸ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೌಂಟ್ ಎವರೆಸ್ಟ್ ಏರಿದ ವೈದ್ಯ ದಂಪತಿಯಿಂದ ಹೊಸ ದಾಖಲೆ

ಅಹಮದಾಬಾದ್: ಮೌಂಟ್ ಎವರೆಸ್ಟ್ ಹತ್ತುವುದು ಅಷ್ಟು ಸಲೀಸಲ್ಲದ ಸಾಹಸ. ಹಲವು ರೀತಿಯಲ್ಲಿ ಸವಾಲು ಎದುರಾಗುತ್ತದೆ. ವಾತಾವರಣ ಬದಲಾವಣೆ ತೊಂದರೆ ಜೊತೆಗೆ, ಆರ್ಥಿಕವಾಗಿ ಹೊರೆಯೂ ಹೌದು.

ಅಹಮದಾಬಾದ್‌ನ ವೈದ್ಯ ದಂಪತಿ ಈ ಸವಾಲಿನ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಸುರಭಿ ಲೆಯು ಗುಜರಾತ್ ವಿದ್ಯಾಪೀಠದಲ್ಲಿ ವೈದ್ಯಕೀಯ ಅಧಿಕಾರಿಯಾಗಿದ್ದು, ಹೇಮಂತ್ ಲೆಯು ಅಹಮದಾಬಾದ್‌ನ ಶಾರದಾಬೆನ್ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದಾರೆ. ಈ ಜೋಡಿ ಮೇ 13 ರಂದು ಎವರೆಸ್ಟ್ ಶಿಖರವನ್ನು ಏರಿತು.

ಅವರು 15 ವರ್ಷಗಳ ಹಿಂದೆ ಪರ್ವತಾರೋಹಣ ಹವ್ಯಾಸ ಬೆಳೆಸಿಕೊಂಡಿದ್ದರು ಮತ್ತು ಕಳೆದೆರಡು ವರ್ಷಗಳಿಂದ ಎವರೆಸ್ಟ್ ಅನ್ನು ಏರಲು ತಯಾರಿ ಕೂಡ ನಡೆಸುತ್ತಿದ್ದರು.

BIG NEWS: ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ; ಬಿ.ವೈ.ವಿಜಯೇಂದ್ರಗೆ ನಿರಾಸೆ

ಡಾ. ಸುರಭಿ ಪ್ರತಿಕ್ರಿಯೆ ನೀಡಿ, ಕಳೆದ ವರ್ಷ, ನನ್ನ ಪತಿ ಮೌಂಟ್ ಎವರೆಸ್ಟ್‌ಗೆ ಪ್ರಯತ್ನಿಸಿದರು ಮತ್ತು ಕ್ಯಾಂಪ್ 4 ತಲುಪಿದರು, ಆದರೆ ಚಂಡಮಾರುತದಿಂದಾಗಿ ಅವರು ಆರೋಹಣವನ್ನು ರದ್ದುಗೊಳಿಸಬೇಕಾಯಿತು. ಅವರ ಜೊತೆ ಬೇಸ್ ಕ್ಯಾಂಪ್ ಗೆ ನಾನೂ ಹೋಗಿದ್ದೆ. ಈ ಬಾರಿ ನಾನೂ ಕೂಡ ಎವರೆಸ್ಟ್‌ ಏರಲು ಬಯಸಿದ್ದೆ ಎಂದಿದ್ದಾರೆ.

ಎವರೆಸ್ಟ್ ಏರುವ ಸಾಮರ್ಥ್ಯವನ್ನು ಹೊಂದಿದ್ದೇವೆಯೇ ಎಂದು ನೋಡಲು ನಾವು ಸೆಪ್ಟೆಂಬರ್ 2021 ರಂದು 8000 ಅಡಿ ಎತ್ತರದ ಮಾನಸ್ಲು ಪರ್ವತವನ್ನು ಏರಿದೆವು ಎಂದು ತಿಳಿಸಿದ್ದಾರೆ.

ಮೌಂಟೇನ್ ಮೂವರ್ಸ್ ಎಂಬ ಪರ್ವತಾರೋಹಿಗಳ ಗುಂಪಿನಲ್ಲಿದ್ದೇವೆ. ಆರಂಭದಲ್ಲಿ ನಮ್ಮ ಗುಂಪು ಒಟ್ಟಾಗಿ ಎವರೆಸ್ಟ್ ಬೇಸ್ ಕ್ಯಾಂಪ್ ನ ಟ್ರೆಕ್ಕಿಂಗ್ ಶಿಬಿರ ಮಾಡಿದೆವು. ನಂತರ ಉಳಿದ ಜನರು ಹಿಂತಿರುಗಿದರು, ಮತ್ತು ನಾವು ಎವರೆಸ್ಟ್ ಕಡೆಗೆ ಹೊರಟೆವು. ಕೆನಡಾದ ಒಬ್ಬ ಗುಜರಾತಿ ಹಾಗೂ ಗುಜರಾತ್‌ನ ಜಮ್ಕಂಬಲಿಯ ಡಾ. ಸೋಮತ್ ಚೆಟಾರಿಯಾ ನಮ್ಮೊಂದಿಗೆ ಸೇರಿಕೊಂಡರು ಎಂದು ಸುರಭಿ ತಿಳಿಸಿದರು.

ಏಪ್ರಿಲ್ 14 ರಂದು ನಮ್ಮ ಪಯಣ ಪ್ರಾರಂಭ ಮಾಡಿದೆವು, ಮೊದಲು ಬೇಸ್ ಕ್ಯಾಂಪ್‌ನಿಂದ 1 ಮತ್ತು 2ನೇ ಶಿಬಿರಗಳಿಗೆ ಹೋದೆವು ಮತ್ತು ಬೇಸ್ ಕ್ಯಾಂಪ್‌ಗೆ ಹಿಂತಿರುಗಿದೆವು. ಆಮೇಲೆ ಮತ್ತೆ 4ನೇ ಕ್ಯಾಂಪ್ ವರೆಗೆ ಹತ್ತಿ ವಾಪಸ್ ಬಂದೆವು. ನಾವು ಏಳು ದಿನ ಕಾದು ಹವಾಮಾನವು ಉತ್ತಮವಾಗಿದ್ದಾಗ ಎವರೆಸ್ಟ್‌ಗೆ ಹೋದೆವು ಎಂದು ವಿವರಿಸಿದ್ದಾರೆ.

ಕುಂಬು ಹಿಮನದಿಯಲ್ಲಿನ ರಸ್ತೆಗಳು ಪ್ರತಿ ಬಾರಿ ಬದಲಾಗುತ್ತವೆ, ಆದ್ದರಿಂದ ಇದು ತುಂಬಾ ಕಷ್ಟಕರವಾಗಿದೆ. ಎರಡು ಹಿಮನದಿಗಳ ನಡುವೆ ಕಣಿವೆಯಿದ್ದರೆ, ಹಿಮನದಿಗಳನ್ನು ದಾಟಲು ಶೆರ್ಪಾಗಳು ಏಣಿಯ ಮೂಲಕ ಸಂಪರ್ಕಿಸುತ್ತಾರೆ. ಹಾಗಾಗಿ ಹಿಂತಿರುಗುವಾಗ ಜಾರಿ ಬಿದ್ದು ನೇಣು ರೀತಿ ಬಿಗಿದಿತ್ತು. ಆಗ ನನಗೆ ಸ್ವಲ್ಪ ಭಯವಾಯಿತು. ಆಗ ಒಬ್ಬ ಶೆರ್ಪಾ ನನ್ನನ್ನು ಹಗ್ಗದ ಸಹಾಯದಿಂದ ಮೇಲಕ್ಕೆ ಎಳೆದ. ಎಂದು ಆ ಘಟನೆಯನ್ನು ಮೆಲಕು ಹಾಕಿದರು.

ಈ ಘಟನೆ ವೇಳೆ ನನ್ನ ಕನ್ನಡಕದ ಗಾಜು ಕಳೆದುಹೋದ ನಂತರ, ಸೂರ್ಯನು ಹಿಮದಿಂದ ಪುಟಿಯುವ ಪ್ರತಿಬಿಂಬ ಕಣ್ಣುಗಳಿಗೆ ಕೋರೈಸಿದ್ದರಿಂದ ಬಲಗಣ್ಣಿನ ಶೇಕಡಾ 70 ರಷ್ಟು ದೃಷ್ಟಿ ಹೋಗಿತ್ತು ಎಂದು ರೋಚಕ ಕ್ಷಣ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...