ಯುವತಿಯು ಸ್ವಯಂಪ್ರೇರಣೆಯಿಂದ ತನ್ನ ಪತಿಯೊಂದಿಗೆ ವಾಸಿಸಲು ನಿರ್ಧಾರಕ್ಕೆ ಬಂದ ಕಾರಣಕ್ಕೆ ದಂಪತಿಯೊಂದಿಗೆ ‘ಅಸಭ್ಯವಾಗಿ ವರ್ತಿಸಬೇಡಿ’ ಎಂದು ಮಹಿಳೆಯ ಪೋಷಕರಿಗೆ ನ್ಯಾಯಾಲಯ ಎಚ್ಚರಿಸಿರುವ ಪ್ರಸಂಗ ನಡೆದಿದೆ.
ಅಂತರ್ಧರ್ಮೀಯರಾದ ವಧು ವರರ ವಿಚಾರ ಗುಜರಾತ್ ಕೋರ್ಟ್ ಮೆಟ್ಟಿಲೇರಿತ್ತು. ಮದುವೆಗೆ ವಿರೋಧವಾದ ಕಾರಣಕ್ಕೆ ದಂಪತಿಗೆ ‘ತೊಂದರೆ’ ಮಾಡಬೇಡಿ ಎಂದು ಮಹಿಳೆಯ ಪೋಷಕರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಒಬಿಸಿ ಕೋಟಾದಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗೆ ಅಂಕಗಳ ಆಧಾರದ ಮೇಲೆ ನೇಮಕಾತಿ: ಹೈಕೋರ್ಟ್ ಮಹತ್ವದ ತೀರ್ಪು
ಆಕೆಯು ತನ್ನ ಓದು ಮುಂದುವರಿಸಲು ಸಿದ್ಧರಿರುವುದರಿಂದ ಆಕೆಯ ಪುಸ್ತಕಗಳು ಮತ್ತು ಬಟ್ಟೆಗಳನ್ನು ಹಸ್ತಾಂತರಿಸುವಂತೆ ಮಹಿಳೆಯ ಪೋಷಕರಿಗೆ ನ್ಯಾಯಾಲಯ ಸೂಚನೆಯನ್ನೂ ನೀಡಿದೆ. ಹಾಗೆಯೇ ದಂಪತಿಗೆ ಯಾವುದೇ ಬೆದರಿಕೆಯ ಸಂದರ್ಭದಲ್ಲಿ ಪೊಲೀಸ್ ರಕ್ಷಣೆ ನೀಡುವಂತೆ ನಿರ್ದೇಶಿಸಿದೆ.
ನವ ದಂಪತಿಯ ಅರ್ಜಿಯ ಪ್ರಕಾರ, ಮಹಿಳೆಗೆ ಪೋಷಕರಿಂದ ಮಾನಸಿಕ ಹಿಂಸೆ ನೀಡಲಾಯಿತು. ಅಷ್ಟೇ ಅಲ್ಲದೆ ಆಕೆ ನಗದು ಮತ್ತು ಆಭರಣಗಳೊಂದಿಗೆ ಮನೆಯಿಂದ ಹೊರಬಂದಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರಂತೆ.
ದೂರಿನ ಬಳಿಕ ಪೊಲೀಸರು ಮಹಿಳೆಯ ಗಂಡನ ಕುಟುಂಬಕ್ಕೆ ಕಿರುಕುಳ ನೀಡಲು ಪ್ರಾರಂಭಿಸಿದರು. ಬಳಿಕ ಪೊಲೀಸರ ಕಿರುಕುಳ ತಪ್ಪಿಸಲು ದಂಪತಿ ರಾಜಸ್ಥಾನದ ಅಜ್ಮೀರ್‌ಗೆ ತೆರಳಿದ್ದರು. ನಂತರ ದಂಪತಿಯನ್ನು ಡ್ಯಾನಿಲಿಮ್ಡಾ ಪೊಲೀಸ್ ಠಾಣೆಗೆ ಕರೆತರಲಾಯಿತು ಮತ್ತು ಅಕೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆಕೆಯ ಜವಾಬ್ದಾರಿಯನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಿತ್ತು.
ಇದಾದ ನಂತರ ಮಹಿಳೆಯ ಪತಿ ಹೇಬಿಯಸ್ ಕಾರ್ಪಸ್ ಅರ್ಜಿಯೊಂದಿಗೆ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಹೈಕೋರ್ಟ್ ಈ ಆದೇಶ ನೀಡಿದೆ.