ಅಹಮದಾಬಾದ್: ಗುಜರಾತ್ ನ ರಾಜ್ ಕೋಟ್ ಬಳಿಯ ಗೇಮಿಂಗ್ ಝೋನ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಗೇಮಿಂಗ್ ಝೋನ್ ನಲ್ಲಿ ವೆಲ್ಡಿಂಗ್ ವೇಳೆ ಹೊತ್ತಿಕೊಂಡ ಕಿಡಿಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡಿದ್ದು, ಮಕ್ಕಳು ಸೇರಿದಂತೆ 28 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ದುರಂತದಲ್ಲಿ 35 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗೇಮಿಂಗ್ ಝೋನ್ ನಲ್ಲಿ ಅಕ್ರಮವಾಗಿ ತೈಲ ಸಂಗ್ರಹಿಸಿ ಇಡಲಾಗಿತ್ತು. 2000 ಲೀಟರ್ ಡೀಸೆಲ್, 1500 ಲೀಟರ್ ಪೆಟ್ರೋಲ್ ಸಂಗ್ರಹಿಸಿ ಇಡಲಾಗಿತ್ತು. ತೈಲ ಸಂಗ್ರಹದಿಂದಾಗಿಯೇ ಬೆಂಕಿಯ ಜ್ವಾಲೆ ವ್ಯಾಪಕವಾಗಿ ಹರಡಿಕೊಂಡಿದ್ದು, ಸಾವು-ನೋವು ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಇನ್ನು ಬೆಂಕಿ ದುರಂತ ಸಂಭವಿಸಿದಂತೆ ಗುಜರಾತ್ ಹೈಕೋರ್ಟ್ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದು, ನಾಳೆ ವಿಚಾರಣೆ ನಡೆಸಲಿದೆ.