
“ಅಹಮದಾಬಾದ್‌ನಲ್ಲಿ ಭಾರೀ ಮಳೆಯ ನಡುವೆ ಜೊಮಾಟೊ ಆಹಾರವನ್ನು ವಿತರಿಸುತ್ತಿದೆ. ಈ ಕಠಿಣ ಪರಿಶ್ರಮ ಡೆಲಿವರಿ ವ್ಯಕ್ತಿಯನ್ನು ಹುಡುಕಲು ಮತ್ತು ಅವರ ಸಮರ್ಪಣೆ ಮತ್ತು ನಿರ್ಣಯಕ್ಕಾಗಿ ಅವರಿಗೆ ಸೂಕ್ತವಾಗಿ ಪ್ರತಿಫಲ ನೀಡುವಂತೆ ನಾನು @deepigoyal ಅನ್ನು ವಿನಂತಿಸುತ್ತೇನೆ” ಎಂದು ಎಕ್ಸ್ ಬಳಕೆದಾರರು ವಿಡಿಯೋ ಹಂಚಿಕೊಂಡು ಬರೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಭಾರೀ ವೀಕ್ಷಣೆ ಗಳಿಸಿದೆ. ಘಟನೆ ಪರ ಮತ್ತು ವಿರೋಧದ ಭಾರೀ ಚರ್ಚೆಯೂ ನಡೆಯುತ್ತಿದೆ.
ಇಂತಹ ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ಕಂಪನಿಯು ತನ್ನ ಉದ್ಯೋಗಿಗಳನ್ನು ಅಪಾಯಕ್ಕೆ ಸಿಲುಕಿಸುವುದು ಸೂಕ್ತವಲ್ಲ. ಹಾಗಾಗಿ ಜೊಮಾಟೋ ತನ್ನ ಕಾರ್ಯಾಚರಣೆಯನ್ನು ಇಂತಹ ಸಂದರ್ಭದಲ್ಲಿ ನಿಲ್ಲಿಸಬೇಕು ಎಂದು ಕೆಲವರು ಹೇಳಿದ್ದಾರೆ. ಮತ್ತಷ್ಟು ಮಂದಿ ಮಳೆ ನೀರಿನಲ್ಲೂ ಚಿಂತಿಸದೇ ಫುಡ್ ಆರ್ಡರ್ ತಲುಪಿಸಿದ ಡೆಲಿವರಿ ಬಾಯ್ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ, ಗುಜರಾತ್‌ನಲ್ಲಿ ಆಗಸ್ಟ್ 25 ರಿಂದ ಮಳೆ ಸಂಬಂಧಿತ ಘಟನೆಗಳಲ್ಲಿ 36 ಜನರು ಸಾವನ್ನಪ್ಪಿದ್ದಾರೆ.