ನವದೆಹಲಿ: ಶಂಕುಸ್ಥಾಪನೆ, ಉದ್ಘಾಟನೆಗೆ ಪ್ರಧಾನಿ ಮೋದಿ ಅವರಿಗೆ ಹೆಚ್ಚಿನ ಸಮಯ ನೀಡಲು ಗುಜರಾತ್ ಚುನಾವಣಾ ದಿನಾಂಕ ಘೋಷಿಸಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚಿನ ಸಮಯ ನೀಡಲು ಚುನಾವಣಾ ಆಯೋಗವು ಗುಜರಾತ್ನ ಚುನಾವಣಾ ದಿನಾಂಕಗಳನ್ನು ಘೋಷಿಸುವುದನ್ನು ಮುಂದೂಡಿದೆ ಎಂದು ಕಾಂಗ್ರೆಸ್ ಪಕ್ಷವು ಶುಕ್ರವಾರ ಹೇಳಿದೆ.
ಚುನಾವಣಾ ಆಯೋಗವು ಶುಕ್ರವಾರ ಗುಜರಾತ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಹಿಮಾಚಲ ಚುನಾವಣೆಯ ದಿನಾಂಕಗಳೊಂದಿಗೆ ಪ್ರಕಟಿಸಲಿಲ್ಲ. ಸಾಮಾನ್ಯವಾಗಿ ಎರಡು ರಾಜ್ಯಗಳಲ್ಲಿ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತವೆ.
ನಿಸ್ಸಂಶಯವಾಗಿ, ಕೆಲವು ಮೆಗಾ ಭರವಸೆಗಳನ್ನು ನೀಡಲು ಮತ್ತು ಹೆಚ್ಚಿನ ಉದ್ಘಾಟನೆಗಳನ್ನು ಮಾಡಲು ಪ್ರಧಾನಿಗೆ ಹೆಚ್ಚಿನ ಸಮಯವನ್ನು ನೀಡಲು ಈರೀತಿ ಮಾಡಲಾಗಿದೆ. ಇದರಲ್ಲಿ ಆಶ್ಚರ್ಯವೇನಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.