ಗ್ರಾಮ ಪಂಚಾಯಿತಿ ಸರಪಂಚ್ ಗಾಗಿ ನಡೆದ ಕದನದಲ್ಲಿ ಮಹಿಳೆಯೊಬ್ಬರು ಅತ್ತೆಯನ್ನು ಸೋಲಿಸಿದ್ದಾರೆ. ಹಲವರ ಗಮನ ಸೆಳೆದಿದ್ದ ಚುನಾವಣಾ ಕದನದಲ್ಲಿ ಮಂಗಳವಾರ ತಡರಾತ್ರಿ ಗಿರ್ ಸೋಮನಾಥ ಜಿಲ್ಲೆಯ ದೇಲವಾಡ ಗ್ರಾಮದ ಸರಪಂಚ್ ಕಚೇರಿಯಲ್ಲಿ ಸೊಸೆ ಅತ್ತೆಯ ವಿರುದ್ಧವೇ ಜಯಭೇರಿ ಬಾರಿಸಿದ್ದಾರೆ.
ಗಿರ್ ಸೋಮನಾಥದ ಉನಾ ತಾಲೂಕಿನ ದೇಲವಾಡ ಗ್ರಾಮ ಪಂಚಾಯಿತಿಗೆ ಭಾನುವಾರ ಮತದಾನ ನಡೆದಿದೆ. ಗ್ರಾಮದ ಸರಪಂಚ್ ಹುದ್ದೆಗೆ ಪೂಜಾ ಬಂಬಾನಿಯಾ ಮತ್ತು ಅವರ ಅತ್ತೆ ಜೀವಿಬೆನ್ ಬಂಬಾನಿಯಾ ನಡುವೆ ಪ್ರಮುಖ ಪೈಪೋಟಿ ಏರ್ಪಟ್ಟಿತ್ತು. ಮಂಗಳವಾರ ಮತ ಎಣಿಕೆ ಕಾರ್ಯ ನಡೆದಿದ್ದು, ತಡರಾತ್ರಿ ಪ್ರಕಟವಾದ ಫಲಿತಾಂಶದಲ್ಲಿ ಪೂಜಾ ಗೆಲುವು ಸಾಧಿಸಿದ್ದಾರೆ. ಅಷ್ಟೇ ಅಲ್ಲ, ಆಕೆಯ ಅಭ್ಯರ್ಥಿಗಳ ಸಮಿತಿಯು ಗ್ರಾಮ ಪಂಚಾಯತ್‌ನ ಎಲ್ಲಾ 16 ಚುನಾವಣಾ ವಾರ್ಡ್‌ಗಳನ್ನು ಗೆದ್ದುಕೊಂಡಿದೆ.
ಭಾನುವಾರ ನಡೆದ ಮತದಾನದ ವೇಳೆ ದೇಲವಾಡದ 5,000ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಹಕ್ಕು ಚಲಾಯಿಸಿದ್ದರು. ಮಂಗಳವಾರ ನಡೆದ ಮತ ಎಣಿಕೆ ವೇಳೆ ಪೂಜಾ ತನ್ನ ಅತ್ತೆಯನ್ನು 1,177 ಮತಗಳಿಂದ ಸೋಲಿಸಿದ್ದಾರೆ.
ಗ್ರಾಮ ಪಂಚಾಯಿತಿಯ 16 ವಾರ್ಡ್‌ಗಳಿಗೆ ಪೂಜಾ ಮತ್ತು ಅವರ ಅಭ್ಯರ್ಥಿಗಳು ಮಡಿಕೆ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.