ಮದುವೆ ಮನೆ ಅಂದ್ರೆ ಅಲ್ಲಿ, ಮಾತು, ತಮಾಷೆ, ಸಂಬಂಧಿಕರ ಹರಟೆ, ಗೆಳೆಯರ ಚೇಷ್ಠೆ ಇವೆಲ್ಲ ಇದ್ದೇ ಇರುತ್ತೆ. ಅದರ ಜೊತೆ ಜೊತೆಗೆ ಮದುಮಗನಿಗೆ, ಮದುಮಗಳಿಗೆ ರೇಗಿಸೋಕಂತಾನೇ ಫನ್ನಿ-ಫನ್ನಿ ಆಗಿರೋ ಗಿಫ್ಟ್ಗಳನ್ನ ಗೆಳೆಯರು ಕೊಡುವುದು ಕಾಮನ್. ಆದರೆ ಗುಜರಾತ್ನಲ್ಲಿ ಮದುಮಗನಿಗೆ ಸಿಕ್ಕ ಉಡುಗೊರೆಯೊಂದು ಆತನ ಜೀವಕ್ಕೇನೇ ಕುತ್ತು ತಂದಿಟ್ಟಿದೆ.
ನವಸಾರಿ ಜಿಲ್ಲೆ ವಂಸ್ಡಾ ತಾಲೂಕಿನ ಗಂಗಾಪುರ ಗ್ರಾಮದ ಹುಡುಗಿಯನ್ನು, ಮಿಂಧಬರಿ ಗ್ರಾಮದ ಲತೇಶ್ ಗವಿತ್ ಎರಡು ದಿನದ ಹಿಂದೆ ಮದುವೆಯಾಗಿದ್ದ. ಮದುವೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಸಹಜವಾಗಿ ಉಡುಗೊರೆಯನ್ನ ಕೊಟ್ಟಿದ್ದಾರೆ. ಈ ಕಾರ್ಯಕ್ರಮ ಮುಗಿದ ನಂತರ ಬಿಡುವಿನ ಸಮಯದಲ್ಲಿ ಗಿಫ್ಟ್ ಗಳನ್ನ ಮದುಮಗ ಒಂದೊಂದಾಗಿ ಓಪನ್ ಮಾಡುತ್ತಿದ್ದಾಗ ಆತನಿಗೆ ಶಾಕಿಂಗ್ ಗಿಫ್ಟ್ ಒಂದು ಸಿಕ್ಕಿತ್ತು.
ʼಕಾಂತಿʼಯುತ ಚರ್ಮಕ್ಕೆ ಬಳಸಿ ಜೇನು
ಅದೊಂದು ರಿಚಾರ್ಜ್ ಮಾಡುವಂತಹ ಆಟಿಕೆಯ ವಸ್ತು. ಲತೇಶ್ ಮತ್ತು ಆತನ ಸೋದರಳಿಯ ಜಿಯಾನ್ ಆ ಆಟಿಕೆ ವಸ್ತುವಿನ ಗಿಫ್ಟ್ ಓಪನ್ ಮಾಡಿ ರಿಚಾರ್ಜ್ ಮಾಡಲು ಮುಂದಾಗಿದ್ದಾರೆ. ಆಗಲೇ ನೋಡಿ ಯಾರೂ ಊಹಿಸೋಕೂ ಆಗದ ರೀತಿಯಲ್ಲಿ ಭಯಂಕರ ಬ್ಲಾಸ್ಟ್ ಸಂಭವಿಸಿದೆ. ಇದರ ಪರಿಣಾಮ ಇಬ್ಬರಿಗೂ ಗಂಭೀರ ರೂಪದ ಗಾಯಗಳಾಗಿವೆ. ಅದರಲ್ಲೂ ಲತೇಶ್ ಕಣ್ಣು, ಕೈ, ತಲೆ ಭಾಗಕ್ಕೆ ತೀವ್ರ ಗಾಯಗಳಾಗಿದೆ. ಇಬ್ಬರಿಗೂ ಈಗ ನವಸಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ.
ಅಸಲಿಗೆ ಇಂತಹದ್ದೊಂದು ಆಘಾತಕಾರಿ ಉಡುಗೊರೆ ಕೊಟ್ಟಿದ್ದು ಕೊಯಂಬಾ ನಿವಾಸಿ ರಾಜು ಪಟೇಲ್. ವಧುವಿನ ಅಕ್ಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅಂತ ಹೇಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಈತ ಬ್ರೇಕಪ್ ಮಾಡಿಕೊಂಡಿದ್ದ. ಅದೇ ಸೇಡನ್ನ ಇಟ್ಟುಕೊಂಡು ಪಾಪಿ ಈ ಕೃತ್ಯ ಎಸಗಿದ್ದಾನೆ. ಸ್ಥಳೀಯ ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ರಾಜು ಪಟೇಲ್ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.