ಗುಜರಾತ್‌ನ ರಾಜ್‌ಕೋಟ್‌ನಲ್ಲಿ ತನ್ನ ತಾಯಿಯನ್ನು ಕೊಂದು ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಮೃತದೇಹದೊಂದಿಗಿನ ಫೋಟೋ ಪೋಸ್ಟ್ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಘಟನೆಯ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದ್ದು, ರಾಜ್‌ಕೋಟ್‌ನ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಭಗತ್ ಸಿಂಗ್ ಗಾರ್ಡನ್‌ನಲ್ಲಿ ಆರೋಪಿ ನೀಲೇಶ್ ಗೋಸಾಯಿ ತನ್ನ ತಾಯಿಯ ಶವದ ಪಕ್ಕದಲ್ಲಿ ಕುಳಿತಿದ್ದ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಜ್ಯೋತಿಬೆನ್ ಗೋಸಾಯಿ ಎಂದು ಗುರುತಿಸಲಾದ 48 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ವಿಚಾರಣೆ ವೇಳೆ ನೀಲೇಶ್ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆರಂಭದಲ್ಲಿ ತನ್ನ ತಾಯಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದ, ಜ್ಯೋತಿಬೆನ್ ಚಾಕುವನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆಗ ಕತ್ತು ಹಿಸುಕಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೃತ್ಯದ ನಂತರ, ಅವನು ತನ್ನ ತಾಯಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಕ್ಷಮಿಸಿ ತಾಯಿ, ನಾನು ನಿನ್ನನ್ನು ಕೊಂದಿದ್ದೇನೆ, ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ, ಓಂ ಶಾಂತಿ” ಎಂದು ಬರೆದಿದ್ದಾನೆ. ಮತ್ತೊಂದು ಪೋಸ್ಟ್ ನಲ್ಲಿ. “ನಾನು ನನ್ನ ತಾಯಿಯನ್ನು ಕೊಂದಿದ್ದೇನೆ, ನನ್ನ ಜೀವನವನ್ನು ಕಳೆದುಕೊಂಡಿದ್ದೇನೆ, ಕ್ಷಮಿಸಿ ತಾಯಿ, ಓಂ ಶಾಂತಿ, ಮಿಸ್ ಯು ಮಾಮ್” ಎಂದು ಬರೆದಿದ್ದಾನೆ.
ಜ್ಯೋತಿಬೆನ್ ಅವರು ವರ್ಷಗಳಿಂದ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಇದು ಮಗನೊಂದಿಗೆ ಆಗಾಗ್ಗೆ ವಾಗ್ವಾದ ಹಲ್ಲೆಯಂತಹ ಘಟನೆಗೆ ಕಾರಣವಾಗಿತ್ತು. ಘಟನೆ ನಡೆದ ದಿನ ನೀಲೇಶ್ ಮತ್ತು ಜ್ಯೋತಿಬೆನ್ ನಡುವೆ ನಡೆದ ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗಿತ್ತು. ಜ್ಯೋತಿಬೆನ್ ಪತಿಯಿಂದ ದೂರವಾಗಿ ನೀಲೇಶ್, ಇತರ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆಕೆ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಳು, ಆದರೆ ಘಟನೆಗೆ ಒಂದು ತಿಂಗಳ ಮೊದಲು ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ನಿಲೇಶ್ ಪೊಲೀಸ್ ಕಸ್ಟಡಿಯಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.