ಕೋವಿಡ್ 19 ಲಸಿಕೆಯನ್ನು ಜನರಿಗೆ ನೀಡುವ ಸಲುವಾಗಿ ದೇಶದ ಪ್ರತಿಯೊಂದು ರಾಜ್ಯಗಳು ಒಂದಿಲ್ಲೊಂದು ಸರ್ಕಸ್ ಮಾಡುತ್ತಲೇ ಇದೆ. ಇದೀಗ ಗುಜರಾತ್ನ ಅಹಮದಾಬಾದ್ನಲ್ಲಿ ಕೊರೊನಾ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸೌಲಭ್ಯಗಳನ್ನು ಬಳಸದಂತೆ ತಾಕೀತು ಮಾಡಲಾಗಿದೆ.
ಕೊರೊನಾ 2 ಡೋಸ್ಗಳಲ್ಲಿ ಕನಿಷ್ಟ 1 ಡೋಸ್ನ್ನೂ ಸ್ವೀಕರಿಸದವರು ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಕಟ್ಟಡಗಳಿಗೆ ಎಂಟ್ರಿ ನೀಡುವಂತಿಲ್ಲ ಎಂದು ಅಹಮದಾಬಾದ್ ನಗರ ಪಾಲಿಕೆ ಖಡಕ್ ಸೂಚನೆ ನೀಡಿದೆ. ಸೆಪ್ಟೆಂಬರ್ 20ರಿಂದ ಈ ಆದೇಶ ಜಾರಿಗೆ ಬರಲಿದೆ.
ಕೊರೊನಾ ಲಸಿಕೆಯ ಕನಿಷ್ಟ 1 ಡೋಸ್ ಸ್ವೀಕರಿಸದವರು ಸೋಮವಾರದಿಂದ ನಗರ ಸಾರಿಗೆ ಸೇವೆ, ಕಂಕಾರಿಯಾ ಸರೋವರದ ಮುಂಭಾಗ, ಸಾಬರಮತಿ ನದಿ ತೀರ, ಗ್ರಂಥಾಲಯಗಳು, ಜಿಮ್, ಕ್ರೀಡಾ ಸಂಕೀರ್ಣ ಸೇರಿದಂತೆ ಹಲವೆಡೆ ಪ್ರವೇಶಿಸುವಂತಿಲ್ಲ ಎಂದು ಎಎಂಸಿ ಆಯುಕ್ತ ಮುಖೇಶ್ ಕುಮಾರ್ ಹೇಳಿದ್ದಾರೆ.
ಒಂದು ಹಾಗೂ ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ನಗರದಲ್ಲಿ ಸಂಚಾರ ಮಾಡಬಹುದಾಗಿದೆ. ಈ ಪ್ರದೇಶಗಳಲ್ಲಿ ಕೊರೊನಾ ಲಸಿಕೆ ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಇದು ಸೆಪ್ಟೆಂಬರ್ 20ರಿಂದ ಜಾರಿಗೆ ಬರಲಿದೆ ಎಂದು ಕುಮಾರ್ ಟ್ವೀಟಾಯಿಸಿದ್ದಾರೆ.