ಬಲವಂತದ ಅಂತರಧರ್ಮೀಯ ಮದುವೆಗಳಿಗೆ ಕಡಿವಾಣ ಹಾಕಲೆಂದು ತರಲಾದ ಗುಜರಾತ್ ಧಾರ್ಮಿಕ ಸ್ವಾತಂತ್ರ‍್ಯ (ತಿದ್ದುಪಡಿ) ಕಾಯಿದೆ, 2021ರಲ್ಲಿ ಇರುವ ಕೆಲವೊಂದು ವಿಧಿಗಳಿಗೆ ಗುಜರಾತ್ ಹೈಕೋರ್ಟ್ ತಡೆಯೊಡ್ಡಿದೆ.
ಜೂನ್ 15ರಂದು ಗೊತ್ತುಪಡಿಸಲಾದ ಈ ಕಾನೂನಿನಲ್ಲಿ ಜನರಿಗೆ ಅನಾವಶ್ಯಕ ಕಿರುಕುಳ ನೀಡುವ ಅವಕಾಶಗಳಿರುವ ಕಾರಣ ಕೆಲವೊಂದು ಸೆಕ್ಷನ್‌ಗಳ ಮೇಲೆ ತಡೆಯಾಜ್ಞೆ ನೀಡುವ ನಿರ್ಧಾರವನ್ನು ಮುಖ್ಯ ನ್ಯಾಯಾಧೀಶ ವಿಕ್ರಂ ನಾಥ್ ಮತ್ತು ಬಿರೇನ್ ವೈಷ್ಣವ್ ಇದ್ದ ಪೀಠ ತೆಗೆದುಕೊಂಡಿದೆ.
ಕೊಡಗಿನ ಬೆಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿದೆ ʼನೀಲಕುರಂಜಿʼ ಪುಷ್ಪ
ಮೇಲ್ಕಂಡ ಕಾಯಿದೆಯಲ್ಲಿ ತರಲಾದ ಕೆಲವೊಂದು ತಿದ್ದುಪಡಿಗಳು ಸಂವಿಧಾನ ವಿರೋಧಿಯಾಗಿವೆ ಎಂದು ಆರೋಪಿಸಿ ಜಾಮಿಯತ್ ಉಲೇಮಾ-ಏ-ಹಿಂದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
“ಒಂದು ಧರ್ಮದ ವ್ಯಕ್ತಿಯು ಮತ್ತೊಂದು ಧರ್ಮದ ವ್ಯಕ್ತಿಯೊಂದಿಗಿನ ವಿವಾಹವನ್ನು ಯಾವುದೇ ಬಲವಂತ ಅಥವಾ ಪ್ರಲೋಭನೆ ಇಲ್ಲದೆ ಸಿಂಧುಗೊಳಿಸಿದ್ದೇ ಆದಲ್ಲಿ ಅದನ್ನು ಬಲವಂತದ ಮತಾಂತರ ಎಂದು ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ಮುಂದಿನ ಆಲಿಕೆಯವರೆಗೂ ಕಾಯಿದೆಯ 3,4, 4ಎ, 4ಬಿ, 4ಸಿ, 5, 6 ಮತ್ತು 6ಎ ಸೆಕ್ಷನ್‌ಗಳು ಸಕ್ರಿಯವಾಗಿರುವುದಿಲ್ಲ” ಎಂದು ಮುಖ್ಯ ನ್ಯಾಯಾಧೀಶರು ಆದೇಶಿಸಿದ್ದಾರೆ.