
ಸೂರತ್ ನ ಹಝಿರಾ ಕೈಗಾರಿಕಾ ಪ್ರದೇಶದಲ್ಲಿ ಆರು ಪಥಗಳ ಒಂದು ಕಿಮೀ ಉದ್ದದ ಸ್ಟೀಲ್ ರಸ್ತೆ ನಿರ್ಮಾಣವಾಗಿದ್ದು, ಇದರ ಮೇಲೆ ಈಗಾಗಲೇ ಟನ್ನುಗಟ್ಟಲೆ ಭಾರವನ್ನು ಹೊತ್ತ ಸಾವಿರಕ್ಕೂ ಅಧಿಕ ಟ್ರಕ್ ಗಳು ಸಂಚರಿಸಿದ್ದು, ರಸ್ತೆಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಇದು ಸಂಪೂರ್ಣವಾಗಿ ಯಶಸ್ಸಾಗುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ.
ವಿಶೇಷ ಸಂಗತಿಯೆಂದರೆ ಸ್ಟೀಲ್ ತ್ಯಾಜ್ಯ ಮರುಬಳಕೆಯ ಸಂಶೋಧನೆ ಭಾಗವಾಗಿ ಈ ಸ್ಟೀಲ್ ರಸ್ತೆ ನಿರ್ಮಾಣವಾಗಿದ್ದು, ದೇಶದಲ್ಲಿ ಪ್ರತಿವರ್ಷ 1.9 ಕೋಟಿ ಟನ್ ನಷ್ಟು ಸ್ಟೀಲ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎನ್ನಲಾಗಿದೆ. ಹೀಗಾಗಿ ಪ್ರಸ್ತುತ ನಿರ್ಮಾಣವಾಗಿರುವ ಸ್ಟೀಲ್ ರಸ್ತೆ ಯಶಸ್ಸಿನ ಬಳಿಕ ಇದನ್ನು ಮುಂದಿನ ದಿನಗಳಲ್ಲಿ ವಿಸ್ತರಿಸಲಾಗುತ್ತದೆ.
ಮತ್ತೊಂದು ಸಂಗತಿಯೆಂದರೆ ಸ್ಟೀಲ್ ರಸ್ತೆ ದೀರ್ಘಕಾಲ ಬಾಳಿಕೆ ಬರುವುದಲ್ಲದೆ, ಮಳೆಗಾಲದಲ್ಲಿ ರಸ್ತೆ ಅಪಘಾತಗಳು ಸಹ ಕಡಿಮೆ ಇರುತ್ತದೆ ಎನ್ನಲಾಗಿದೆ.