ಅಹಮದಾಬಾದ್: ಗುಜರಾತ್ ನ ರಾಜ್ ಕೋ ಟಿಆರ್ ಪಿ ಗೇಮ್ ಝೋನ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 27 ಜನರು ಸಜೀವದಹನವಾಗಿರುವ ಘಟನೆ ನಡೆದಿತ್ತು. ಈ ದುರಂತದಲ್ಲಿ ಸ್ವತಃ ಗೇಮ್ ಝೋನ್ ಮಾಲೀಕ ಕೂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗೇಮ್ ಝೋನ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರದ್ದು ಒಂದೊಂದು ನೋವಿನ ಕಥೆಗಳು ನವದಂಪತಿಗಳು, ಒಂದೇ ಕುಟುಂಬದ ಐವರು, 12 ಮಕ್ಕಳು ಸೇರಿದಂತೆ 27 ಜನರು ಸಾವನ್ನಪ್ಪಿದ್ದರು. ಇದೀಗ ಗೇಮ್ ಝೋನ್ ಮಾಲೀಕ ಪ್ರಕಾಶ್ ಹಿರನ್ ಕೂಡ ಇದೇ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹಗಳು ಗುರುತು ಸಿಗದಷ್ಟು ಸುಟ್ಟು ಕರಕಲಾಗಿವೆ. ಪ್ರಕಾಶ್ ಅವರ ತಾಯಿಯ ಡಿಎನ್ ಎ ಜೊತೆಗೆ ಶವದ ಡಿಎನ್ ಎ ಮ್ಯಾಚ್ ಆಗಿದ್ದು, ಮೃತದೇಹ ಗೇಮ್ ಝೋನ್ ಮಾಲೀಕ ಪ್ರಕಾಶ್ ಅವರದ್ದೇ ಎಂದು ತಿಳಿದುಬಂದಿದೆ.
ಪ್ರಕಾಶ್ ಹಿರನ್ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಬೆಂಕಿ ಅವಘಡದ ಬಳಿಕ ಪ್ರಕಾಶ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪ್ರಕಾಸ್ ಸಹೋದರ ಪೊಲಿಸರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಪರಿಶೀಲಿಸಿದಾಗ ಪ್ರಕಾಶ್ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ.