ಸೂರತ್: ಗುಜರಾತ್ ನ ಸೂರತ್ ನಲ್ಲಿ ಪ್ರಿಯಕರನ ಎದುರೇ ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಭಾನುವಾರ ರಾತ್ರಿ ಘಟನೆ ನಡೆದಿದೆ. 27 ವರ್ಷದ ಮಹಿಳೆ ಮೇಲೆ ಪ್ರಿಯಕರನ ಎದುರೇ ಆರೋಪಿಗಳು ಕೃತ್ಯವೆಸಗಿ ತಮ್ಮ ಮೊಬೈಲ್ ಗಳೊಂದಿಗೆ ಪರಾರಿಯಾಗಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಮಹಿಳೆ ತನ್ನ ಸಂಗಾತಿಯೊಂದಿಗೆ ರಸ್ತೆಬದಿಯಲ್ಲಿ ಕುಳಿತಿದ್ದಾಗ ಆರೋಪಿಗಳು ಬಂದಿದ್ದು, ತಮ್ಮೊಂದಿಗೆ ಬರುವಂತೆ ಬೆದರಿಸಿದ್ದಾರೆ. ಆದರೆ, ಜೋಡಿ ಒಪ್ಪದಿದ್ದಾಗ ಯುವಕನನ್ನು ಅಮಾನುಷವಾಗಿ ಥಳಿಸಿ ಕಟ್ಟಿಹಾಕಿದ್ದಾರೆ. ಸಮೀಪದ ಮೈದಾನದಲ್ಲಿ ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಘಟನೆ ನಂತರ, ಸಂತ್ರಸ್ತೆ ತನ್ನ ಸಹೋದರಿಗೆ ವಿಷಯ ತಿಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಐವರು ಅಪರಿಚಿತ ಪುರುಷರ ವಿರುದ್ಧ ಸೋಮವಾರ ಸಂಜೆ ದೂರು ದಾಖಲಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಐವರು ಆರೋಪಿಗಳನ್ನು ಗುರುತಿಸಿ ಆದಷ್ಟು ಬೇಗ ಬಂಧಿಸಲು ಕ್ರಮಕೈಗೊಳ್ಳಲಾಗಿದೆ. ಆರೋಪಿಗಳು ಬಿಹಾರಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ ಮಹಿಳೆ ಗೆಳೆಯನ ಹೇಳಿಕೆ ಪಡೆಯಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಹೇಳಿದ್ದಾರೆ.