ಅಹಮದಾಬಾದ್: ರೈತರಿಗೆ ಸ್ಮಾರ್ಟ್ಫೋನ್ ಖರೀದಿಸಲು 1500 ರೂ. ಆರ್ಥಿಕ ನೆರವು ನೀಡಲು ಗುಜರಾತ್ ಸರ್ಕಾರ ತೀರ್ಮಾನ ಕೈಗೊಂಡಿದೆ.
ಕೃಷಿಕ್ಷೇತ್ರದಲ್ಲಿ ಡಿಜಿಟಲ್ ಸೇವೆಗಳ ಮಾಹಿತಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ರೈತರಿಗೆ ಸ್ಮಾರ್ಟ್ಫೋನ್ ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಕೃಷಿ ಕ್ಷೇತ್ರದ ಮಾಹಿತಿ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ವಿವಿಧ ಉದ್ದೇಶಗಳ ಬಳಕೆಗಾಗಿ ಸ್ಮಾರ್ಟ್ಫೋನ್ ಖರೀದಿಸಲು ರೈತರನ್ನು ಉತ್ತೇಜಿಸಲು 1500 ರೂ. ನೀಡಲಾಗುತ್ತದೆ.
ಗುಜರಾತ್ ರಾಜ್ಯದಲ್ಲಿ ಕೃಷಿ ಭೂಮಿ ಹೊಂದಿರುವ ಯಾವುದೇ ರೈತರು ಯೋಜನೆಯ ಪ್ರಯೋಜನ ಪಡೆಯಬಹುದು. ಸ್ಮಾರ್ಟ್ಫೋನ್ ಒಟ್ಟು ಮೊತ್ತದ ಶೇಕಡ 10 ರಷ್ಟು 1500 ರೂ. ನೀಡಲಾಗುವುದು. ಇದಕ್ಕಾಗಿ i-khedut portal. ನಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದು ಹೇಳಲಾಗಿದೆ.