ಕಳ್ಳರು ಆನ್‌ಲೈನ್‌ನಲ್ಲಿ ಮೋಸ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಡಿಜಿಟಲ್ ದರೋಡೆಕೋರರ ತಂಡವು ಇತ್ತೀಚೆಗೆ ಅಹಮದಾಬಾದ್‌ನ ಸ್ಯಾಟಲೈಟ್ ಎಕ್ಸ್‌ಟೆನ್ಶನ್‌ನ ನಿವಾಸಿ ಮತ್ತು ಉದ್ಯಮಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ದೋಚಿದ್ದಾರೆ. ಯುವ ಉಧ್ಯಮಿಯ ಮೊಬೈಲ್‌ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಬ್ಯಾಂಕ್ ಖಾತೆಯ ಎಲ್ಲಾ ಮಾಹಿತಿ ಕಲೆಕ್ಟ್ ಮಾಡಿ, ಅವರ ಬ್ಯಾಂಕ್ ಖಾತೆಯಿಂದ 46.38 ಲಕ್ಷ ರೂ. ದೋಚಿದ್ದಾರೆ.
ವಂಚನೆಗೊಳಗಾಗಿರುವ, ರಾಕೇಶ್ ಶಾ ಮನೆಯಲ್ಲಿದ್ದ ಸಂದರ್ಭದಲ್ಲಿ ಅಪರಿಚಿತ ಸಂಖ್ಯೆಯಿಂದ ಅವರ ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಬಂದಿದೆ. ಆ ನಂತರ ಅವರ ಮೊಬೈಲ್‌ನ ಟವರ್ ಮತ್ತು ಸಿಮ್ ಅನ್ ರೀಚಬಲ್ ಆಗಿದ್ದು, ನಂತರ ನಿಷ್ಕ್ರಿಯವಾಗಿದೆ. ಅವರ ಎರಡೂ ಸಿಮ್ ಕಾರ್ಡ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಅವರು ವೊಡಾಫೋನ್-ಐಡಿಯಾ ಶೋರೂಮ್‌ಗೆ ಹೋಗಿ ಪೋಸ್ಟ್‌ಪೇಯ್ಡ್ ಸಂಖ್ಯೆಯನ್ನು ತಕ್ಷಣವೇ ಸಕ್ರಿಯಗೊಳಿಸಿದ್ದಾರೆ.
ಮನೆಯಲ್ಲೇ ಕೊರೊನಾ ಪರೀಕ್ಷಿಸಲು ಲಭ್ಯ ಈ 5 ಟೆಸ್ಟ್ ಕಿಟ್…! ಇಲ್ಲಿದೆ ಬೆಲೆ ಸೇರಿದಂತೆ ಮತ್ತಿತರ ವಿವರ
ಪ್ರಿಪೇಯ್ಡ್ ಸಂಪರ್ಕವನ್ನು ನಾಲ್ಕು ಗಂಟೆಗಳಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ರಾತ್ರಿ ಇಮೇಲ್ ಕಳುಹಿಸಿದ ನಂತರ ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ಸಿಮ್ ಕೈಕೊಟ್ಟಿದೆ ಎಂದು ಶಾ ಸಿಮ್ ಕಂಪನಿಗೆ ದೂರು ನೀಡಿದ್ದರು. ಮರುದಿನ ಬೆಳಿಗ್ಗೆ ಸಿಮ್ ಅನ್ನು ಸಕ್ರಿಯಗೊಳಿಸುವ ಪ್ರಕ್ರಿಯೆಯಲ್ಲಿ ಎರಡೂ ಸಿಮ್ ಕಾರ್ಡ್‌ಗಳು ಮತ್ತೆ ಡೀಆ್ಯಕ್ಟಿವೇಟ್ ಆಗಿವೆ ಎಂದು ಶಾ ಅರಿತುಕೊಂಡರು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವೊಡಾಫೋನ್ ಸ್ಟೋರ್‌ಗೆ ಭೇಟಿ ನೀಡಿದ ನಂತರ, ಕೋಲ್ಕತ್ತಾದ ವೊಡಾಫೋನ್ ಸ್ಟೋರ್‌ನಲ್ಲಿ ಎರಡೂ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಕಂಡುಬಂದಿದೆ. ಮೊದಲು ಪೋಸ್ಟ್ ಪೇಯ್ಡ್ ನಂಬರ್ ಆ್ಯಕ್ಟಿವೇಟ್ ಮಾಡಿ ಪ್ರಿಪೇಯ್ಡ್ ನಂಬರ್ ಡಿಆಕ್ಟಿವೇಟ್ ಮಾಡಿದ್ಮೇಲೆ, ಮೊಬೈಲ್ ಆ್ಯಕ್ಟಿವೇಟ್ ಆಗಿರುವುದು ಗೊತ್ತಾಗಿದೆ.
ಈ ಘಟನೆಯ ನಂತರ, ಅವರು ಬ್ಯಾಂಕ್ ಗೆ ಹೋಗಿ ಪರೀಕ್ಷಿಸಿದಾಗ, ಅವರ ಬ್ಯಾಂಕ್ ಖಾತೆಯಿಂದ 46 ಲಕ್ಷ ವಿಥ್ ಡ್ರಾ ಆಗಿದೆ ಎಂದು ತಿಳಿದು ಬಂದಿದೆ. ಆರ್‌ಟಿಜಿಎಸ್ ಮತ್ತು ಐಎಂಪಿಎಸ್ ಮೂಲಕ ಹಣವನ್ನು ಹಿಂಪಡೆಯಲಾಗಿದ್ದು, ಸೋನೈ ದಾಸ್, ರೋಹಿತ್ ರಾಯ್ ಮತ್ತು ರಾಕೇಶ್ ವಿಶ್ವಕರ್ಮ ಎನ್ನುವವರ ಬ್ಯಾಂಕ್ ಖಾತೆಗಳಿಗೆ ಹಣವನ್ನ ವರ್ಗಾಯಿಸಲಾಗಿದೆ.
ಈ ಘಟನೆಯ ನಂತರ ಸೈಬರ್ ಕ್ರೈಂ ಬ್ರಾಂಚ್‌ನಲ್ಲಿ ದೂರು ದಾಖಲಾಗಿದ್ದು, 11 ವಹಿವಾಟುಗಳ ಮೂಲಕ 46.36 ಲಕ್ಷ ರೂಪಾಯಿ ವಿಥ್ ಡ್ರಾ ಮಾಡಲಾಗಿದೆ, ಬ್ಯಾಂಕಿಂಗ್ ವಹಿವಾಟಿನ ಒಟಿಪಿಗಳನ್ನು ಸ್ವೀಕರಿಸಿ ಕಳ್ಳರು ಈ ವಂಚನೆ ಎಸಗಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.