ಕಳೆದ ಒಂದೂವರೆ ವರ್ಷದಿಂದ ಮನುಕುಲದ ದಿನನಿತ್ಯದ ಬದುಕಿನ ಆಯಾಮವನ್ನೇ ಬದಲಿಸಿರುವ ಕೋವಿಡ್-19 ಸೋಂಕಿನ ವಿರುದ್ಧ ರಕ್ಷಣೆಗೆ ಇರುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕಿಸಿಕೊಳ್ಳುವುದು.
ಗುಜರಾತ್ನ ವಡೋದರಾದ ಕಲಾವಿದರೊಬ್ಬರು ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳು ಹಾಗೂ ಲಸಿಕೆ ಕುರಿತು ಜಾಗೃತಿ ಮೂಡಿಸಲು ವಿಶಿಷ್ಟವಾದ ಕಲಾಕೃತಿಯೊಂದನ್ನು ರಚಿಸಿದ್ದಾರೆ.
ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲಿ ಸೆಕೆಂಡ್ ನೊಳಗೆ ಸಿಗುತ್ತೆ ‘ಕೋವಿಡ್ ಪ್ರಮಾಣಪತ್ರ’
ಗಣೇಶೋತ್ಸವ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣೇಶನ ಮೂರ್ತಿ ರಚಿಸಿರುವ ಕಲಾವಿದ ದಕ್ಷೇಶ್ ಜಂಗಿಡ್, ಲಸಿಕೆ ಹಾಗೂ ಮಾಸ್ಕ್ಗಳ ಜೊತೆಗೆ ಗಣೇಶ ಕುಳಿತಿರುವ ಮೂರ್ತಿಯನ್ನು ರಚಿಸಿದ್ದಾರೆ.
2.5 ಅಡಿಯ ಈ ಕಲಾಕೃತಿಯಲ್ಲಿ ಕೋವಿಡ್ ಸೋಂಕಿನ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಮಂದಿಯ ರಚನೆಗಳೂ ಇವೆ.