ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾರಾಟವಾದ ಕಂಪೆನಿ ಎಂದ ಚಾಟ್ಜಿಪಿಟಿ…..! 03-03-2023 8:58AM IST / No Comments / Posted In: Latest News, Live News, International ಈ ಡಿಜಿಟಲ್ ಯುಗದಲ್ಲಿ ಚಾಟ್ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್ ನಾವು ಏನು ಹೇಳಿದರೂ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ತಿಳಿಸುತ್ತದೆ. ಕಳೆದ ನವೆಂಬರ್ ತಿಂಗಳಿನಲ್ಲಿ ಶುರುವಾಗಿರುವ ಈ ಆ್ಯಪ್ ಕೋಲಾಹಲವನ್ನೇ ಸೃಷ್ಟಿಸಿದೆ. ಈಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಚಾಟ್‌ಜಿಪಿಟಿಗೆ ತನ್ನ ಕಂಪೆನಿಯ ಬಗ್ಗೆ ಕೇಳಿದೆ. ಗಿನ್ನೆಸ್ ದಾಖಲೆ ಎಂದರೇನು ಎಂದು ಕೇಳಿದೆ. ಅದು ನೀಡಿರುವ ಉತ್ತರವನ್ನು ಗಿನ್ನೆಸ್ ಸಂಸ್ಥೆ ಟ್ವಿಟರ್ನಲ್ಲಿ ತಮಾಷೆಯಾಗಿ ಶೇರ್ ಮಾಡಿಕೊಂಡಿದೆ. ಅಷ್ಟಕ್ಕೂ ಚಾಟ್ಜಿಪಿಟಿ ಹೇಳಿದ್ದು ಏನೆಂದರೆ, 2001 ರಲ್ಲಿ ಯಾರೋ ಮಾರಾಟ ಮಾಡಿರುವ ಕಂಪೆನಿ ಇದಾಗಿದೆ ಎಂದು ಹೇಳಿದೆ. ಈ ಬಗ್ಗೆ ತಮಾಷೆಯಾಗಿ ಬರೆದುಕೊಳ್ಳಲಾಗಿದೆ. ಇದರ ಜೊತೆಗೆ “ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವಾರ್ಷಿಕವಾಗಿ ಪ್ರಕಟವಾದ ಒಂದು ಉಲ್ಲೇಖ ಪುಸ್ತಕವಾಗಿದ್ದು ಅದು ವಿಶ್ವ ದಾಖಲೆಗಳ ಪಟ್ಟಿ ಮಾಡುತ್ತದೆ. ಪುಸ್ತಕವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಲಿಮಿಟೆಡ್ ಪ್ರಕಟಿಸಿದೆ, ಇದರ ಅಂಗಸಂಸ್ಥೆ ಐರಿಶ್ ಕಂಪನಿ ಡಿಯಾಜಿಯೊ. ಇದು ಮೊದಲ ಬಾರಿಗೆ 1955ರಲ್ಲಿ ಪ್ರಕಟವಾಯಿತು ಮತ್ತು ನಂತರ ವಿಶ್ವ ದಾಖಲೆಗಳಲ್ಲಿ ವ್ಯಾಪಕವಾಗಿ ಗುರುತಿಸಲ್ಪಟ್ಟ ಪ್ರಾಧಿಕಾರವಾಗಿದೆ. ಪುಸ್ತಕದಲ್ಲಿ ಕಾಣಿಸಿಕೊಂಡಿರುವ ದಾಖಲೆಗಳು ಮಾನವ ಸಾಧನೆಗಳು, ನೈಸರ್ಗಿಕ ವಿದ್ಯಮಾನಗಳು ಮತ್ತು ಮಾನವ ನಿರ್ಮಿತ ಸೃಷ್ಟಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ” ಎಂದು ಸರಿಯಾಗಿ ಬರೆದಿದ್ದರೂ ಮಾರಾಟವಾಗಿರುವ ಕಂಪೆನಿ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಂಪೆನಿ ಹೇಳಿದೆ. asked ChatGPT what they knew about us and they thought we were owned by a company that sold us in 2001 lol pic.twitter.com/OZSVsID4Dc — Guinness World Records (@GWR) February 28, 2023