ಪುರುಷರ ಗಡ್ಡ ಅಮ್ಮಮ್ಮ ಅಂದ್ರೂ ಏನೆಲ್ಲಾ ಮಾಡಬಲ್ಲದು? ಗಿನ್ನೆಸ್ ವಿಶ್ವ ದಾಖಲೆಗಳ ಪೇಜ್‌ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿರುವ ಈತನ ಗಡ್ಡದಷ್ಟು ಬಲಿಷ್ಠವಾದ ಗಡ್ಡ ನಿಮ್ಮದಾಗಿದ್ದಲ್ಲಿ ನೀವೂ ಸಹ ಏನು ಬೇಕಾದರೂ ಮಾಡಬಹುದು.
ಈ ಭೂಪ ತನ್ನ ಗಡ್ಡದಿಂದ 63 ಕೆಜಿ ತೂಕವಿರುವ ಮಹಿಳೆಯನ್ನು ಮೇಲೆತ್ತಿದ್ದಾನೆ. ವಿಶ್ವದಾಖಲೆ ಸೃಷ್ಟಿಸಲು ಜನ ಏನೆಲ್ಲಾ ಕಸರತ್ತು ಮಾಡುತ್ತಾರೆ? ತಮ್ಮ ಕೌಶಲ್ಯ, ಸಾಮರ್ಥ್ಯ ಹಾಗೂ ಏಕಾಗ್ರತೆಯನ್ನೆಲ್ಲಾ ಒರೆಗೆ ಹಚ್ಚುತ್ತಾರೆ ಮಂದಿ.
ಆದರೆ ಆಂಟನಾಸ್ ಕಂಟ್ರಿಮಾಸ್‌ಗೆ ವಿಶ್ವದಾಖಲೆ ಸೃಷ್ಟಿಸಲು ತನ್ನ ಗಡ್ಡ ಮಾತ್ರವೇ ಸಾಕಾಗಿದೆ. ಮಾನವನ ಗಡ್ಡದಿಂದ ಮೇಲೆತ್ತಲಾದ ಅತ್ಯಂತ ಭಾರದ ತೂಕ ಎಂಬ ದಾಖಲೆಯನ್ನು ಈತ ಸೃಷ್ಟಿಸಲು ತನ್ನ ಗಡ್ಡದಿಂದ 63.8 ಕೆಜಿಯನ್ನು ಮೇಲೆತ್ತಿದ್ದಾನೆ.
ಈತನ ಸಾಹಸದ ಈ ವಿಡಿಯೋ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಗಡ್ಡಕ್ಕೆ ಕಟ್ಟಲಾದ ಹಾರ್ನೆಸ್ ಮೂಲಕ ಮಹಿಳೆಯನ್ನು ಮೇಲೆತ್ತುತ್ತಿರುವ ಕೊಂಟ್ರಿಮಾಸ್‌ನ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ.