ವೀಕೆಂಡ್ ವೇಳೆ ನಡೆದ ಸಭೆಯೊಂದು ವಿಶೇಷ ಕಾರಣಕ್ಕೆ ಗಿನ್ನಿಸ್ ರೆಕಾರ್ಡ್‌ಗೆ ಸೇರಿದೆ. ವಿಶೇಷವೆಂದರೆ ಒಂದೇ ಹೆಸರಿನವರು ಸೇರಿದ್ದ ದೊಡ್ಡ ಸಭೆ ಎಂದು ಗುರುತಿಸಲಾಗಿದ್ದು, ಅದು ಅಪರೂಪದ ದಾಖಲೆ ಎನಿಸಿದೆ.
ಟೋಕಿಯೊದ ಶಿಬುಯಾ ಜಿಲ್ಲೆಯ ಸಭಾಂಗಣದಲ್ಲಿ ‘ಹಿರೋಕಾಜು ತನಕಾ’ ಎಂದು ಕರೆಯಲ್ಪಡುವ 178 ಜನರು ಜಮಾಯಿಸಿದ್ದರು. 2005 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಟ್ಟಿಗೆ ಸೇರಿದ ಮಾರ್ಥಾ ಸ್ಟೀವರ್ಟ್ಸ್ ಎಂಬ ಹೆಸರಿನ 164 ಜನರು ಈ ದಾಖಲೆ ಹೊಂದಿದ್ದರು.
ಸಭೆಯಲ್ಲಿ ವಿವಿಧ ವರ್ಗಗಳ ಜನರು ಮತ್ತು ವಿವಿಧ ವಯೋಮಾನದವರು ಕಂಡುಬಂದರು. ವಿಯೆಟ್ನಾಂನ ಹನೋಯಿಯಿಂದ ಜಪಾನ್‌ಗೆ ತೆರಳಿದ್ದ ಮೂರು ವರ್ಷದ ಅಂಬೆಗಾಲಿಡುವ ಮಗು ಸೇರಿದಂತೆ 80 ವರ್ಷದ ವೃದ್ಧರೂ ಅಲ್ಲಿ ಇದ್ದರು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಜಪಾನ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಪ್ರಕಾರ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರರು ಹೊಸ ದಾಖಲೆ ಎಂದು ಎಂದು ಘೋಷಿಸಿದ ನಂತರ ಜನರು ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದು.
ಟೋಕಿಯೊದ ಕಾರ್ಪೊರೇಟ್ ಉದ್ಯೋಗಿ ಹಿರೋಕಾಜು ತನಕಾ ಮೂರನೇ ಪ್ರಯತ್ನದಲ್ಲಿ ಈ ದಾಖಲೆ ಸಾಧಿಸಲು ಯಶಸ್ವಿಯಾದರು.
“ಹಿರೋಕಾಜು ತನಕಾ” ಅಭಿಯಾನ ಆರಂಭಿಸಿದ ಅವರು, ಎಲ್ಲರನ್ನೂ ಒಟ್ಟುಗೂಡಿಸಲು ಸಾಕಷ್ಟು ಬೆವರು ಹರಿಸಿದ್ದರು. “ನಾವು ಇಂತಹ ಹಾಸ್ಯಾಸ್ಪದ ದಾಖಲೆಯನ್ನು ಸಾಧಿಸುತ್ತೇವೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ,” ಎಂದು ಅವರು ಹೇಳಿದ್ದಾರೆ.