alex Certify ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲು ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲು ಸೂಚನೆ

ಬೆಂಗಳೂರು: 2024-25ನೇ ಸಾಲಿಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯವನ್ನು ಅನುಷ್ಠಾನಗೊಳಿಸುವ ಕುರಿತು ಮಾರ್ಗದರ್ಶನವನ್ನು ನೀಡಲಾಗಿರುತ್ತದೆ.

ಆದಾಗ್ಯೂ ಶಾಲಾ ಹಂತದಲ್ಲಿ ಅನುಷ್ಠಾನ ಸಂಬಂಧ ನಿರ್ವಹಿಸಬೇಕಾದ ಕ್ರಮಗಳು, ವಿಜ್ಞಾನ ಪ್ರಯೋಗಾಲಯ ಉಪಕರಣಗಳ ಖರೀದಿ ಪ್ರಕ್ರಿಯೆಯನ್ನು ಸಮರ್ಪಕವಾದ ರೀತಿಯಲ್ಲಿ ಅನುಸರಿಸದೇ ಇರುವುದನ್ನು ಗಮನಿಸಲಾಗಿದೆ. ಈ ಕುರಿತು ಡಯಟ್ ನೋಡಲ್ ಅಧಿಕಾರಿಗಳು, ಡಯಟ್ ಪ್ರಾಂಶುಪಾಲರು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಅಗತ್ಯ ಮಾರ್ಗದರ್ಶನ ನೀಡುವಂತೆ ತಿಳಿಸಿದೆ.

ಪ್ರಯೋಗಾಲಯ ಅನುಷ್ಠಾನದಲ್ಲಿ ಗಮನಿಸಲಾದ ವ್ಯತ್ಯಯಗಳನ್ನು ಈ ಕೆಳಗಿನಂತೆ ಸರಿಪಡಿಸಲು ತಿಳಿಸಿದೆ.

ಪಠ್ಯಕ್ರಮದ ಪ್ರಯೋಗಗಳಿಗೆ ಅನುಗುಣವಾಗಿ ಎಲ್ಲಾ ವಿದ್ಯಾರ್ಥಿಗಳು ಪ್ರಯೋಗಗಳಲ್ಲಿ ತೊಡಗಿಕೊಳ್ಳಲು ಅವಕಾಶವಾಗುವಂತೆ ಖರೀದಿಸಬೇಕಾದ ಉಪಕರಣಗಳ ಪಟ್ಟಿಯನ್ನು ಸಿದ್ಧಪಡಿಸದಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಶಾಲಾ ಹಂತದಲ್ಲಿ 8, 9 ಮತ್ತು 10ನೇ ತರಗತಿಗಳ ವಿಜ್ಞಾನ ವಿಷಯದ ಪಠ್ಯಕ್ರಮದಲ್ಲಿನ ಪ್ರಯೋಗಗಳಿಗೆ ಹೊಂದಿಕೆಯಾಗುವ ಪ್ರಯೋಗಗಳನ್ನು ನಿರ್ವಹಿಸಲು ಅನುವಾಗುವಂತೆ ಉಪಕರಣಗಳನ್ನು ಖರೀದಿಸಲು ಕ್ರಮವಹಿಸುವುದು.(ಈಗಾಗಲೇ ನೀಡಲಾಗಿರುವ ಅನುಬಂಧ-2ನ್ನು ಅವಲೋಕಿಸಿ ಉಪಕರಣಗಳ ಪಟ್ಟಿಯನ್ನು ಅಂತಿಮಗೊಳಿಸುವುದು)

ಶಾಲೆಗಳಲ್ಲಿ ನಿಯಮಾನುಸಾರ ದರಪಟ್ಟಿ ಪ್ರಕಟಿಸದೇ ಇರುವುದನ್ನು ಗಮನಿಸಲಾಗಿದ್ದು, ಶಾಲಾ ಮುಖ್ಯ ಶಿಕ್ಷಕರು ದರಪಟ್ಟಿ ಪ್ರಕಟಣೆ, ವಿಧಿಸಬೇಕಾದ ಷರತ್ತುಗಳು, ಕಾರ್ಯಾದೇಶವನ್ನು ನಿಯಮಾನುಸಾರ ನೀಡುವಂತೆ ಕ್ರಮವಹಿಸುವುದು.

ಉಲ್ಲೇಖಿತ ಸರ್ಕಾರಿ ಆದೇಶಗಳಲ್ಲಿ ಸೂಚಿಸಿರುವ ಘಟಕ ವೆಚ್ಚದಂತೆ ಅನುದಾನವನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸುವುದು. ಯಾವುದೇ ಕಾರಣಕ್ಕೂ ಪ್ರಯೋಗಾಲಯ ಸಂಬಂಧಿತ ಕಾಮಗಾರಿ ಹಾಗೂ ಪ್ರಯೋಗಾಲಯ ಸಂಬಂಧಿತ ಇತರೆ ವೆಚ್ಚಗಳಿಗಾಗಿ(ಉದಾಹರಣೆಗೆ ಪ್ರಯೋಗಾಲಯ ಸುಣ್ಣ ಬಣ್ಣ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ಕರ್ಟನ್ ಅಳವಡಿಕೆ ಇತ್ಯಾದಿಗಳಿಗೆ) ಅನುದಾನ ಬಳಕೆ ಮಾಡುವಂತಿಲ್ಲ.

ಶಾಲೆಗಳು ತಮ್ಮ ಶಾಲೆಯ ಡಿಡಿಓ ಕೋಡ್ನ್ನು ತಮ್ಮ ವ್ಯಾಪ್ತಿಯ ಖಜಾನೆಗೆ (ತಾಲ್ಲೂಕು/ಜಿಲ್ಲೆ) ಲೆಕ್ಕ ಶೀರ್ಷಿಕೆ 4202-01-201-1-04-180ಗೆ ಮ್ಯಾಪ್ ಮಾಡಿಕೊಳ್ಳಲು ಕ್ರಮವಹಿಸುವುದು. ಮ್ಯಾಪಿಂಗ್ ಮಾಡಿದ ನಂತರ ಬಿಲ್ಲುಗಳನ್ನು ಕೈಂ ಮಾಡಲು ಸಾಧ್ಯವಾಗುತ್ತದೆ. ನಂತರ ಖರೀದಿಸಿದ ಉಪಕರಣಗಳಿಗೆ ಮೊತ್ತವನ್ನು ಪಾವತಿಸಬಹುದಾಗಿರುತ್ತದೆ.

K2 ಮೂಲಕ ಪಾವತಿಸಬೇಕಾದ ಕ್ರಮಗಳನ್ನರಿತು ಸಕಾಲದಲ್ಲಿ ಪಾವತಿಯಾಗುವಂತೆ ಕ್ರಮವಹಿಸುವುದು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡದೇ ಅನುದಾನವು ವ್ಯಪಗತವಾಗದಂತೆ ಕ್ರಮವಹಿಸುವುದು. ನಿಗದಿತ ಅವಧಿಯಲ್ಲಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಅನುಷ್ಠಾನಗೊಳಿಸಿ ಪ್ರಯೋಗಾಲಯ ಸೌಲಭ್ಯ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪುವ ಮೂಲಕ ಉತ್ತಮ ಕಲಿಕೆಗೆ ಅನುವು ಮಾಡಿಕೊಡುವುದು. ಈ ಎಲ್ಲಾ ಅಂಶಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...