alex Certify BIG NEWS: ಕೊರೋನಾ ಕಡಿಮೆಯಾಗ್ತಿದ್ದಂತೆ ಸರ್ಕಾರದಿಂದ ಹೊಸ ಮಾರ್ಗಸೂಚಿ: ಜಿಮ್, ಈಜುಕೊಳ, ಯೋಗಕೇಂದ್ರ, ಚಿತ್ರರಂಗಕ್ಕೆ ಸಿಹಿಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೋನಾ ಕಡಿಮೆಯಾಗ್ತಿದ್ದಂತೆ ಸರ್ಕಾರದಿಂದ ಹೊಸ ಮಾರ್ಗಸೂಚಿ: ಜಿಮ್, ಈಜುಕೊಳ, ಯೋಗಕೇಂದ್ರ, ಚಿತ್ರರಂಗಕ್ಕೆ ಸಿಹಿಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ತಜ್ಞರ ಸಲಹೆ ಹಾಗೂ ವಿವಿಧ ವಲಯದ ಬೇಡಿಕೆ ಅನುಸಾರ ಚಿತ್ರಮಂದಿರಗಳಿಗೆ ಪೂರ್ಣ ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ನಿರ್ಬಂಧವನ್ನು ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ಯೋಗ ಕೇಂದ್ರ, ಜಿಮ್, ಈಜುಕೊಳಗಳ ನಿರ್ಬಂಧವನ್ನು ಸಡಿಲಿಕೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

2 ಡೋಸ್ ಲಸಿಕೆಯನ್ನು ಕಡ್ಡಾಯಗೊಳಿಸಿ ಹೊಸ ಮಾರ್ಗಸೂಚಿ ನೀಡಲಾಗಿದೆ. ಪ್ರೇಕ್ಷಕರಿಗೆ ಎರಡು ಡೋಸ್ ಲಸಿಕೆ ಕಡ್ಡಾಯದೊಂದಿಗೆ ಚಿತ್ರಮಂದಿರ, ರಂಗಮಂದಿರಗಳ ಪೂರ್ಣ ಭರ್ತಿಗೆ ಅವಕಾಶ ನೀಡಲಾಗಿದೆ. ಪ್ರವೇಶದ್ವಾರದಲ್ಲಿ ಪ್ರತಿಯೊಬ್ಬರಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆಗೆ ಸೂಚಿಸಲಾಗಿದೆ. ರೋಗಲಕ್ಷಣ ಇಲ್ಲದವರಿಗೆ ಮಾತ್ರ ಅನುಮತಿ ಇರುತ್ತದೆ. ಮಾಸ್ಕ್ ಬಳಕೆ ಕಡ್ಡಾಯವಾಗಿದೆ.

ಯೋಗಕೇಂದ್ರ, ಜಿಮ್, ಈಜುಕೊಳ ಗಳಲ್ಲಿಯೂ ರೋಗಲಕ್ಷಣ ಇಲ್ಲದವರಿಗೆ ಮಾತ್ರ ಪ್ರವೇಶ. 2 ಡೋಸ್ ಲಸಿಕೆ, ಕಡ್ಡಾಯವಾಗಿರುತ್ತದೆ. ದೈಹಿಕವಾಗಿ 6 ಅಡಿ ಅಂತರ ಕಾಯ್ದುಕೊಳ್ಳಬೇಕಿದೆ. ಸ್ವಚ್ಛತೆ ಪಾಲನೆ ಅಗತ್ಯವೆಂದು ಹೇಳಲಾಗಿದೆ.

ಮದುವೆ ಸಮಾರಂಭಗಳಿಗೆ ಹೊರಾಂಗಣದಲ್ಲಿ 300 ಜನ, ಒಳಾಂಗಣದಲ್ಲಿ 200 ಜನರ ನಿರ್ಬಂಧ ಮುಂದುವರೆದಿದೆ. ಎಲ್ಲ ಧಾರ್ಮಿಕ, ಸಾಮಾಜಿಕ, ರಾಜಕೀಯ ರ್ಯಾಲಿ, ಧರಣಿ, ಸಮಾವೇಶ, ಪ್ರತಿಭಟನೆಗಳಿಗೆ ನಿರ್ಬಂಧವಿದೆ. ಕ್ರೀಡಾಂಗಣ, ಕ್ರೀಡಾ ಸಂಕೀರ್ಣದಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರಿಗೆ ಅವಕಾಶವಿದೆ. ದೇವಾಲಯ ಸೇರಿ ಧಾರ್ಮಿಕ ಸ್ಥಳದಲ್ಲಿ ಒಂದು ಬಾರಿಗೆ 50 ಮಂದಿಗೆ ಮಾತ್ರ ಪ್ರವೇಶವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...