ನವದೆಹಲಿ: ಹಿರಿಯರಿಗೆ ನೀಡುವ ಕೊರೋನಾ ಔಷಧಿಗಳನ್ನು ಮಕ್ಕಳಿಗೆ ಕೊಡಬಾರದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕುರಿತಂತೆ ಮತ್ತಷ್ಟು ಮಾರ್ಗಸೂಚಿಗಳನ್ನು ನೀಡಲಾಗಿದೆ.
ಕೊರೋನಾ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾರ್ಗಸೂಚಿಗಳನ್ನು ನೀಡಿದೆ. ಹಿರಿಯರಿಗೆ ಔಷಧಗಳನ್ನು ಮಕ್ಕಳಿಗೆ ಶಿಫಾರಸು ಮಾಡುವುದಿಲ್ಲ ಎಂದು ಹೇಳಲಾಗಿದೆ.
ಐವರ್ ಮೆಸಿಟಿನ್, ಅಜಿತ್ರೋಮೈಸಿನ್, ಫೆವಿಪಿರಾವಿರ್ ಸೇರಿದಂತೆ ಅನೇಕ ಔಷಧಗಳು ಮಕ್ಕಳ ಚಿಕಿತ್ಸೆಗೆ ಬೇಡ. ಮಕ್ಕಳ ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಗಳ ಉನ್ನತೀಕರಣ, ಪ್ರತ್ಯೇಕ ಉಪಕರಣ ಅಗತ್ಯವೆಂದು ಕೇಂದ್ರದಿಂದ ನೀಡಲಾಗಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.