ಮನೆಗೆ ಬರುವ ಅತಿಥಿ ದೇವರ ಸಮಾನ. ಭಾರತೀಯ ಸಂಸ್ಕೃತಿಯಲ್ಲಿ ಮನೆಗೆ ಬರುವ ಅತಿಥಿಯನ್ನು ದೇವರೆಂದು ಪರಿಗಣಿಸಲಾಗುತ್ತದೆ. ‘ಅತಿಥಿ ದೇವೋ ಭವಃ’ ಎನ್ನಲಾಗುತ್ತದೆ. ಆದ್ರೆ ಮನು ಸ್ಮೃತಿಯ ಪ್ರಕಾರ ಕೆಲವರನ್ನು ಮನೆಗೆ ಕರೆಯಲೇಬಾರದು. ಅಪ್ಪಿ-ತಪ್ಪಿ ಬಂದ್ರೆ ಅವರನ್ನು ಸ್ವಾಗತಿಸಿ, ಸನ್ಮಾನ ಮಾಡಬಾರದು.
ಕಪಟಿ, ಆಹಾರವನ್ನು ಹಾಳು ಮಾಡುವವ, ಲೂಟಿಕೋರ, ತನ್ನ ಹಿತಕ್ಕಾಗಿ ಕೆಟ್ಟದ್ದನ್ನು ಬಯಸುವವರನ್ನು ಎಂದೂ ಮನೆಗೆ ಕರೆದು ಸತ್ಕಾರ ಮಾಡಬೇಡಿ ಎಂದಿದೆ ಮನುಸ್ಮೃತಿ. ಇಂಥವರು ಮನೆಗೆ ಬಂದ್ರೆ ನಿಮ್ಮ ಮನೆಯ ಶಾಂತಿ ಹಾಳಾಗುತ್ತದೆ.
ಎರಡು ತಲೆಯ ಹಾವಿನಂತಿರುವ ಅವರು ಮುಂದೊಂದು ಹಿಂದೊಂದು ಮಾತನಾಡ್ತಾರೆ. ಬೇರೆಯವರ ಘನತೆ, ಸಂಪತ್ತು, ಗೌರವವನ್ನು ಕಸಿದುಕೊಳ್ತಾರೆ. ಇಂಥವರ ಸತ್ಕಾರ ಮಾಡುವುದರಿಂದ ನಮ್ಮ ಪ್ರಗತಿಗೆ ನಾವೇ ಅಡ್ಡಗಾಲು ಹಾಕಿಕೊಂಡಂತೆ.
ಇಂಥ ವ್ಯಕ್ತಿಗಳು ತಮ್ಮ ಜೊತೆ ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ತರುತ್ತಾರೆ. ಕುಟುಂಬದ ಸದಸ್ಯರೊಬ್ಬರು ತಿಳಿಯದೇ ಈ ಶಕ್ತಿಯ ಪ್ರಭಾವಕ್ಕೊಳಗಾಗ್ತಾರೆ. ಇದರಿಂದಾಗಿ ಕುಟುಂಬ ಸರ್ವನಾಶ ಹೊಂದುತ್ತದೆ.