ರೆಸ್ಟೋರೆಂಟ್ ಅಂದರೆ ಹೇಗಿರಬೇಕು..? ಊಟ ಮಾಡೋಕೆ ಸರಿಯಾದ ಜಾಗ, ಉತ್ತಮ ಆಸನ ವ್ಯವಸ್ಥೆ, ಮೇಜು ಇವೆಲ್ಲವೂ ಬೇಕು. ಆದರೆ ಎಂದಾದರೂ ಫಿಶ್ ಟ್ಯಾಂಕ್ನಲ್ಲಿ ಕಾಲಿಟ್ಟು ಊಟ ಮಾಡುವ ಸಾಹಸ ಮಾಡಿದ್ದೀರೇ..? ಇಲ್ಲ ಎಂದಾದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ 15 ಸೆಕೆಂಡ್ಗಳ ವಿಡಿಯೋವನ್ನು ನೀವು ನೋಡಲೇಬೇಕು.
ಕೋಯ್ ಪಾಂಡ್ ಕೆಫೆಯಲ್ಲಿ ಕುರ್ಚಿ ಹಾಗೂ ಮೇಜುಗಳನ್ನು ಫಿಶ್ ಟ್ಯಾಂಕ್ನಲ್ಲಿ ಇಡಲಾಗಿದೆ. ಫಿಶ್ ಟ್ಯಾಂಕ್ನಲ್ಲಿ ಕಾಲನ್ನು ಇಳಿಸಿಕೊಂಡು ಗ್ರಾಹಕರು ಇಲ್ಲಿನ ಖಾದ್ಯಗಳನ್ನು ಸವಿಯಬಹುದಾಗಿದೆ. ರೆಡಿಟ್ನಲ್ಲಿ 18 ಸೆಕೆಂಡ್ಗಳ ವಿಡಿಯೋ ಶೇರ್ ಮಾಡಲಾಗಿದ್ದು ಇದರಲ್ಲಿ ಸಣ್ಣ ಕೋಣೆಯೊಂದನ್ನು ಫಿಶ್ ಟ್ಯಾಂಕ್ನಂತೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಕುರ್ಚಿ ಮೇಜುಗಳನ್ನು ಇಟ್ಟಿರೋದನ್ನು ಕಾಣಬಹುದಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದ ಇತರೆ ವೇದಿಕೆಗಳಲ್ಲೂ ವೈರಲ್ ಆಗುತ್ತಿದೆ. ಫಿಶ್ ಟ್ಯಾಂಕ್ ರೆಸ್ಟಾರೆಂಟ್ ವಿಡಿಯೋ ನೋಡಿದ ನೆಟ್ಟಿಗರು ಇಲ್ಲಿ ಊಟ ಮಾಡೋದಾದರೂ ಹೇಗೆ ಎಂದು ಮೂಗು ಮುರಿಯುತ್ತಿದ್ದಾರೆ.