ಮದುವೆ ಮನೆಯಲ್ಲಿ ವಧು ವರರಿಗೆ ಈರುಳ್ಳಿ ಹಾರ ಹಾಕುವುದು, ಪೆಟ್ರೋಲ್ ನೀಡುವುದು ಹೀಗೆ ವಿಲಕ್ಷಣ ಪ್ರಸಂಗಗಳು ನಡೆಯುವುದುಂಟು. ದುಬಾರಿಯಾದ ದಿನಬಳಕೆಯ ಸಾಮಾನ್ಯ ವಸ್ತುಗಳನ್ನು ನೀಡಿ ಬೆಲೆ ಏರಿಕೆಯ ಅಣಕ ಮಾಡುವ ಹಾಗೂ ಮದುವೆ ಮನೆಯಲ್ಲೊಂದು ಹಾಸ್ಯ ಸೃಷ್ಟಿಸುವ ಪ್ರಸಂಗಗಳು ಅಲ್ಲಲ್ಲಿ ನಡೆಯುವುದುಂಟು.
ಇದೀಗ ನಿಂಬೆಹಣ್ಣಿನ ಸರದಿ. ಹೆಚ್ಚುತ್ತಿರುವ ತಾಪಮಾನ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ದೇಶಾದ್ಯಂತ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದ್ದು, ಮದುವೆಯಲ್ಲಿ ವರನಿಗೆ ನಿಂಬೆಹಣ್ಣು ಉಡುಗೊರೆ ನೀಡಿದ ಪ್ರಸಂಗ ನಡೆದಿದೆ.
ʼನಮ್ಮ ಮೆಟ್ರೋʼ ನಿಯಮ ಉಲ್ಲಂಘಿಸುವವರ ಪಟ್ಟಿಯಲ್ಲಿ ಕುಡುಕರದ್ದೇ ಅಗ್ರಸ್ಥಾನ
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಮದುವೆಯಲ್ಲಿ ನಿಂಬೆಹಣ್ಣು ನೀಡಿದ್ದು, ಇದರ ಫೋಟೋ ಹರಿದಾಡುತ್ತಿದೆ. ಇದರಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟವರು ವರನಿಗೆ ನಿಂಬೆಹಣ್ಣನ್ನು ಹಸ್ತಾಂತರಿಸುತ್ತಿರುವುದನ್ನು ಕಾಣಬಹುದಾಗಿದೆ.
ದೇಶದಲ್ಲಿ ನಿಂಬೆಹಣ್ಣಿನ ಬೆಲೆ ಸಾಕಷ್ಟು ಹೆಚ್ಚಾಗಿದೆ. ಈ ಸೀಸನ್‌ನಲ್ಲಿ ನಿಂಬೆಹಣ್ಣು ತುಂಬಾ ಅಗತ್ಯವಾಗಿದೆ. ಅದಕ್ಕಾಗಿಯೇ ನಾನು ನಿಂಬೆಹಣ್ಣು ಉಡುಗೊರೆಯಾಗಿ ನೀಡಿದ್ದೇನೆ ಎಂದು ದಿನೇಶ್ ಎಂಬುವರು ಹೇಳಿದ್ದಾರಾಗಿ ಸುದ್ದಿಮಾಧ್ಯಮ ವರದಿ ಮಾಡಿದೆ.
ಬಹುತೇಕ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದು ನಿಂಬೆ ಹಣ್ಣನ್ನು 10 ರೂ.ನಿಂದ 15 ರೂ.ವರೆಗೆ ಮಾರಾಟ ಮಾಡಲಾಗುತ್ತಿದ್ದು, ಪ್ರತಿ ಕೆಜಿ ಸಗಟು ಬೆಲೆ 200ಕ್ಕಿಂತ ಹೆಚ್ಚಿದೆ.
ಈ ಬಾರಿ ನಿಂಬೆ ಬೆಳೆಯ ಉತ್ಪಾದನೆ ಕಡಿಮೆಯಾಗಿದೆ ಮತ್ತು ರಂಜಾನ್ ಮತ್ತು ತಾಪಮಾನದ ಹೆಚ್ಚಳದಿಂದಾಗಿ ಬೇಡಿಕೆ ಹೆಚ್ಚಾಗಿದೆ ಎಂದು ಸಗಟು ವ್ಯಾಪಾರಿ ಹೇಳಿದ್ದಾರೆ.