ಗೋಕಾಕ್: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಬಾಟಿಂಗ್ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮಾತನಡಿದ ರಮೇಶ್ ಜಾರಕಿಹೊಳಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಹಿಂದುಳಿಯುತ್ತದೆ ಎನ್ನುವುದು ತಪ್ಪು. ಗ್ಯಾರಂಟಿ ಯೋಜನೆಗಳಿಗೆ 70 ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸ್ವತಃ ಹಣಕಾಸು ಮಂತ್ರಿಯೂ ಆಗಿರುವುದರಿಂದ ಹಲವು ಬಾರಿ ಬಜೆಟ್ ಮಂಡಿಸಿರುವುದರಿಂದ ಅವರಿಗೆ ಹಣ ಹೇಗೆ ತೆಗೆಯಬೇಕೆಂದು ಗೊತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ 70 ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಇದರ ಎರಡರಷ್ಟು ಟ್ಯಾಕ್ಸ್ ಏರಿಸಿದ್ದಾರೆ. ಹಣ ಹೇಗೆ ತರಬೇಕು ಎಂಬುದು ಅವರಿಗೆ ತಿಳಿದಿದೆ. ಗ್ಯಾರಂಟಿಯಿಂದ ಅಭಿವೃದ್ಧಿ ಆಗಲ್ಲ ಅನ್ನೋದು ಸುಳ್ಳು ಎಂದು ಹೇಳಿದರು.