ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ 2023-24ನೇ ಸಾಲಿನ ಜಿಟಿಟಿಸಿ ಡಿಪ್ಲೋಮಾ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ದಾಖಲಾತಿ ಬಯಸಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಜೂನ್ 16ರ ಶುಕ್ರವಾರದಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 29 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಜಿಟಿಟಿಸಿ ರಾಜ್ಯದಾದ್ಯಂತ 30 ಡಿಪ್ಲೋಮೋ ಕಾಲೇಜುಗಳನ್ನು ನಡೆಸುತ್ತಿದ್ದು, 10ನೇ ತರಗತಿ ವಿದ್ಯಾರ್ಹತೆ ಹೊಂದಿರುವವರು ಪ್ರವೇಶಾತಿ ಪಡೆದುಕೊಳ್ಳಬಹುದಾಗಿದೆ. ಜುಲೈ 1ರಿಂದ ಮೊದಲ ಸುತ್ತಿನ ಕೌನ್ಸೆಲಿಂಗ್ ನಡೆಯಲಿದ್ದು, ಜುಲೈ 6ರಂದು ಈ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ.
ಹಾಸನ, ಮಂಗಳೂರು, ಕಲಬುರಗಿ, ಬೆಳಗಾವಿ, ದಾಂಡೇಲಿ, ಹೊಸಪೇಟೆ, ಹರಿಹರ, ಕೂಡಲಸಂಗಮ, ಕನಕಪುರ, ಲಿಂಗಸಗೂರು, ಗುಂಡ್ಲುಪೇಟೆ, ಕಡೂರು, ಹುಮ್ನಾಬಾದ್, ಕೋಲಾರ, ತುಮಕೂರು, ಶಿವಮೊಗ್ಗ, ಗೌರಿಬಿದನೂರು, ಚಿಕ್ಕೋಡಿ, ಗೋಕಾಕ, ಉಡುಪಿ, ಯಾದಗಿರಿ, ಚಿತ್ರದುರ್ಗ, ಚಳ್ಳಕೆರೆ, ಕೊಪ್ಪಳ, ದೇವನಹಳ್ಳಿ ಹಾಗೂ ಮಾಗಡಿಯಲ್ಲಿರುವ ಕಾಲೇಜುಗಳಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ https://gttc.karnataka.gov.in ಅಥವಾ ಸಹಾಯವಾಣಿ ಸಂಖ್ಯೆ 155267 ಗೆ ಕರೆ ಮಾಡಬಹುದಾಗಿದೆ.