ಮೈಸೂರು: ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಪಕ್ಕಾ ಆದಂತಿದೆ. ಜೆಡಿಎಸ್ ಪಕ್ಷಕ್ಕೆ ಜಿ.ಟಿ. ದೇವೇಗೌಡರು ಗುಡ್ ಬೈ ಹೇಳಲಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ನನಗೆ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ, ಇನ್ನು ಮುಂದೆ ಜೆಡಿಎಸ್ ನಲ್ಲಿರಲು ಸಾಧ್ಯವಿಲ್ಲ. ಪಕ್ಷದ ವರಿಷ್ಠರಾದ ದೇವೇಗೌಡರಿಗೆ ಸಂದೇಶ ತಲುಪಿಸಿ ನನ್ನನ್ನು ಕ್ಷಮಿಸಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದೇನೆ. ನೀನು ಮರಿ ದೇವೇಗೌಡ. ನನ್ನೊಂದಿಗೆ ಇರು ಎಂದು ಗೌಡರು ತಿಳಿಸಿದ್ದರು. ನನಗೆ ನೀವು ದೇವರ ಸಮಾನ ಎಂದು ಅವರಿಗೆ ಹೇಳಿದ್ದೇನೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಸೇರುವ ಬಗ್ಗೆ ಸುಳಿವು ನೀಡಿದ ಜಿಟಿಡಿ, ಜೆಡಿಎಸ್ ಪಕ್ಷದಲ್ಲಿ ಆದ ಅಪಮಾನಗಳ ಬಗ್ಗೆ ಇತ್ತೀಚೆಗೆ ದೇವೇಗೌಡರ ಜೊತೆ ಹೇಳಿಕೊಂಡಿದ್ದೇನೆ. ದಯವಿಟ್ಟು ಕ್ಷಮಿಸಿ ಎಂದು ತಿಳಿಸಿದ್ದೇನೆ. ನನ್ನೊಂದಿಗೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದಿದ್ದೇನೆ. ಕಾಂಗ್ರೆಸ್ ನಲ್ಲಿ ಒಡಕಿಲ್ಲ ಎಂದು ಹೇಳಿದ್ದಾರೆ.