ಒಂದು ದಿನದ ಬಡ್ಡಿ, ವಿಳಂಬ ಶುಲ್ಕ ರದ್ದು ಮಾಡಿದ GST ಸಮಿತಿ 22-09-2021 11:46AM IST / No Comments / Posted In: Business, Latest News, Live News ಸೋಮವಾರದಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ಸ್ ಫೈಲ್ ಮಾಡಲು ಸಮಸ್ಯೆಗಳನ್ನು ಎದುರಿಸಿದ ಕೆಲ ತೆರಿಗೆ ಪಾವತಿದಾರರಿಗೆ ಒಂದು ದಿನದ ಮಟ್ಟಿಗೆ ತಡವಾದ ಪಾವತಿ ಶುಲ್ಕ ಹಾಗೂ ಬಡ್ಡಿಯಲ್ಲಿ ವಿನಾಯಿತಿ ನೀಡಲು ಆದಾಯ ತೆರಿಗೆಯ ಸಮಸ್ಯೆ ಪರಿಹಾರ ಸಮಿತಿ ನಿರ್ಧರಿಸಿದೆ. ಸೆಪ್ಟೆಂಬರ್ 20ರಂದು ವಿದ್ಯುನ್ಮಾನ ನಗದು ನೋಂದಣಿ ವ್ಯವಸ್ಥೆ (ಇಸಿಎಲ್) ದೋಷಪೂರಿತವಾಗಿದ್ದ ಕಾರಣ ಕೆಲವೊಂದು ತೆರಿಗೆ ಪಾವತಿದಾರರಿಗೆ ಅನಾನುಕೂಲವಾದ ವಿಷಯವನ್ನು ಖುದ್ದು ಕೇಂದ್ರ ಪರೋಕ್ಷ ತೆರಿಗೆ ಮಂಡಳಿ (ಸಿಬಿಐಸಿ) ಟ್ವೀಟ್ ಮೂಲಕ ತಿಳಿಸಿದೆ. ಆಗಸ್ಟ್ ತಿಂಗಳ ತೆರಿಗೆಯನ್ನು ಜಿಎಸ್‌ಟಿಆರ್-3ಬಿ ಮೂಲಕ ಪಾವತಿಸಲು ಹಾಗೂ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ಸೆಪ್ಟೆಂಬರ್ 20 ಕಡೆಯ ದಿನವಾಗಿತ್ತು. “ಈ ಸಮಸ್ಯೆ ಪರಿಹರಿಸಲೆಂದು ತಡವಾದ ಶುಲ್ಕದ ರದ್ದತಿ ಹಾಗೂ ಬಡ್ಡಿಯನ್ನು ತೆರವುಗೊಳಿಸಲು ಜಿಎಸ್‌ಟಿ ಜಾಲಕ್ಕೆ ಸೂಚಿಸಲಾಗಿದೆ,” ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ. GST Update on difficulty in updation of Electronic Cash Ledger on 20.09.2021. @Infosys_GSTN pic.twitter.com/pT1zjFo9AG — CBIC (@cbic_india) September 21, 2021