ನವದೆಹಲಿ: ಜೀವವಿಮೆ ಪ್ರೀಮಿಯಂ ಮತ್ತು ಹಿರಿಯ ನಾಗರಿಕ ಆರೋಗ್ಯ ವಿಮೆಯ ಮೇಲೆ ವಿಧಿಸಲಾಗುತ್ತಿದ್ದ ಶೇಕಡ 18ರಷ್ಟು ಜಿಎಸ್ಟಿ ತೆರಿಗೆ ತೆಗೆದು ಹಾಕಬೇಕೆಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿಗೆ ಜಿಎಸ್ಟಿ ಕುರಿತ ರಾಜ್ಯ ಸಚಿವರ ಸಮೂಹ ಶಿಫಾರಸು ಮಾಡಿದೆ.
ಟರ್ಮ್ ಲೈಫ್ ಇನ್ಶುರೆನ್ಸ್ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯ ಪ್ರೀಮಿಯಂ ಮೊತ್ತಕ್ಕೆ ಜಿಎಸ್ಟಿಯಿಂದ ವಿನಾಯಿತಿ ನೀಡಲು ಶನಿವಾರ ನಡೆದ ರಾಜ್ಯಗಳ ಸಚಿವರ ಸಮಿತಿ ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ.
ಜೀವವಿಮೆ ಹಾಗೂ ಹಿರಿಯ ನಾಗರಿಕರ ಆರೋಗ್ಯ ವಿಮೆಯ 5 ಲಕ್ಷ ರೂಪಾಯಿಗಳ ಕವರೇಜ್ ವರೆಗಿನ ವಿಮೆಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬೇಕು. 5ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಕವರೇಜ್ ವಿಮೆಗಳ ಮೇಲಿನ ಶೇಕಡ 18 ರಷ್ಟು ತೆರಿಗೆ ಮುಂದುವರೆಯಲಿದೆ. ಜೊತೆಗೆ ಕವರೇಜ್ ಮೊತ್ತವನ್ನು ಲೆಕ್ಕಿಸದೇ ಹಿರಿಯ ನಾಗರಿಕರ ವಿಮೆ ಮೇಲಿನ ತೆರಿಗೆಯನ್ನು ಜಿಎಸ್ಟಿ ಮಂಡಳಿ ರದ್ದು ಮಾಡುವ ನಿರೀಕ್ಷೆ ಇದೆ.