ತೆರಿಗೆ ಸಂಗ್ರಹದ ವರ್ಧನೆಗೆ ಮಾರ್ಗಗಳನ್ನು ಹುಡುಕುತ್ತಿರುವ ಕೇಂದ್ರ ಸರ್ಕಾರದ ಅಧಿಕಾರಿಗಳ ಕಣ್ಣಿಗೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 7,421 ಕೊಟಿ ರೂಪಾಯಿಗಳ ವಂಚನೆಯ ಪ್ರಕರಣವೊಂದು ಬಿದ್ದಿದೆ.
ರಾಜ್ಯ ಸಭೆಗೆ ಕೊಟ್ಟ ಲಿಖಿತ ಉತ್ತರವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಆಗಿರುವ ತೆರಿಗೆ ವಂಚನೆಯ ವಿವರಗಳನ್ನು ವಿತ್ತ ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಕೊಟ್ಟಿದ್ದಾರೆ. ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಗಳ ಮೂಲಕ ಒಟ್ಟಾರೆ 1,920 ಕೋಟಿ ರೂಪಾಯಿಗಳನ್ನು ವಸೂಲು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಬಂಪರ್ ಸ್ಯಾಲರಿ: ಇಬ್ಬರಿಗೆ 75 ಲಕ್ಷ ರೂ., 81 ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವೇತನದ ಉದ್ಯೋಗ
2021ರ ವಿತ್ತೀಯ ವರ್ಷದಲ್ಲಿ ಒಟ್ಟಾರೆ 12,596 ತೆರಿಗೆ ವಂಚನೆಯ ಪ್ರಕರಣಗಳು ಕಂಡುಬಂದಿದ್ದು, 49,384 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಇದರಲ್ಲಿ 12,235 ಕೋಟಿ ರೂಪಾಯಿಗಳನ್ನು ವಸೂಲು ಮಾಡಲಾಗಿದೆ.