ನವದೆಹಲಿ: ಡಿಸೆಂಬರ್ ನಲ್ಲಿ 1.77 ಕೋಟಿ ರೂ. GST ಸಂಗ್ರಹವಾಗಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಸಂಗ್ರಹವಾಗಿದ್ದ 1.65 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಇದು ವರ್ಷದಿಂದ ವರ್ಷಕ್ಕೆ 7.3% ರಷ್ಟು ಹೆಚ್ಚಾಗಿದೆ. ಭಾರತದ ಒಟ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ಡಿಸೆಂಬರ್‌ನಲ್ಲಿ 1.77 ಲಕ್ಷ ಕೋಟಿ ರೂ.ಗೆ ತಲುಪಿದೆ.
ಡಿಸೆಂಬರ್‌ನ ಆದಾಯ ವಿತರಣೆಯು ಕೇಂದ್ರ ಜಿಎಸ್‌ಟಿಯಿಂದ 32,836 ಕೋಟಿ ರೂ.,, ರಾಜ್ಯ ಜಿಎಸ್‌ಟಿಯಿಂದ 40,499 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ 47,783 ಕೋಟಿ ರೂ. ಮತ್ತು ಸೆಸ್ ನಿಂದ 11,471 ಕೋಟಿ ರೂ. ಒಳಗೊಂಡಿದೆ.
ದೇಶೀಯ ವಹಿವಾಟಿನಿಂದ GST 8.4% ಬೆಳವಣಿಗೆಯನ್ನು ದಾಖಲಿಸಿದೆ, ಮೊತ್ತವು 1.32 ಲಕ್ಷ ಕೋಟಿ ರೂ. ಆಗಿದೆ. ಆಮದು ಆದಾಯವು 4% ರಷ್ಟು ಏರಿಕೆಯಾಗಿ 44,268 ಕೋಟಿ ರೂ.ಗೆ ತಲುಪಿದೆ.
ಡಿಸೆಂಬರ್ ನಲ್ಲಿ ಸಂಗ್ರಹವಾದ GST ನವೆಂಬರ್ 1.82 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾಗಿದೆ, ಇದು ವರ್ಷದಿಂದ ವರ್ಷಕ್ಕೆ 8.5% ಬೆಳವಣಿಗೆಯನ್ನು ದಾಖಲಿಸಿದೆ. ಏಪ್ರಿಲ್ 2024 ರಲ್ಲಿ 2.10 ಲಕ್ಷ ಕೋಟಿ ರೂ. ಮೀರಿದ ಅತ್ಯಧಿಕ GST ಸಂಗ್ರಹವಾಗಿತ್ತು.