ನವದೆಹಲಿ : ಕರ್ನಾಟಕದಲ್ಲಿ ಜುಲೈ ತಿಂಗಳಿನಲ್ಲಿ 1.6 ಲಕ್ಷ ಕೋಟಿ ರೂ ಜಿಎಸ್ ಟಿ ಸಂಗ್ರಹವಾಗಿದ್ದು, ಈ ಮೂಲಕ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
2023 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ ಟಿ ಆದಾಯ 1,65,105 ಕೋಟಿ ರೂ., ಇದರಲ್ಲಿ ಸಿಜಿಎಸ್ ಟಿ 29,773 ಕೋಟಿ ರೂ., ಎಸ್ ಜಿ ಎಸ್ ಟಿ 37,623 ಕೋಟಿ ರೂ., ಐಜಿಎಸ್ ಟಿ 85,930 ಕೋಟಿ ರೂ., (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 41,239 ಕೋಟಿ ರೂ.ಗಳು ಸೇರಿದಂತೆ) ಮತ್ತು 11,779 ಕೋಟಿ ರೂ. ಸೆಸ್ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
CGST , SGST ಮತ್ತು IGST ಸೇರಿ ಒಟ್ಟು GST ಸಂಗ್ರಹ ಆಗುತ್ತದೆ. ಇಲ್ಲಿ CGST ಎಂದರೆ ಕೇಂದ್ರಕ್ಕೆ ಸಂದಾಯವಾಗುವ ತೆರಿಗೆಯಾಗಿದೆ. SGST ಎಂಬುದು ರಾಜ್ಯಗಳ ಪಾಲಾಗುವ ತೆರಿಗೆಯಾಗಿದೆ.