ನವದೆಹಲಿ: ಭಾನುವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ ಆಗಸ್ಟ್ 2024 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಶೇಕಡ 10ರಷ್ಟು ಜಿಗಿತ ಕಂಡಿದೆ. 1,74,962 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಸರಕು ಮತ್ತು ಸೇವಾ ತೆರಿಗೆಯಿಂದ(GST) ದೇಶದ ಆದಾಯವು ಆಗಸ್ಟ್ 2023 ರಲ್ಲಿ 1,59,069 ಕೋಟಿ ರೂ. ಆಗಿದೆ.
ಆಗಸ್ಟ್ 2024 ರಲ್ಲಿ GST ಮರುಪಾವತಿಗಳು 24,460 ಕೋಟಿ ರೂ. ಮರುಪಾವತಿಯನ್ನು ಸರಿಹೊಂದಿಸಿದ ನಂತರ, ಭಾರತದ ನಿವ್ವಳ GST ಸಂಗ್ರಹವು ಆಗಸ್ಟ್ 2024 ರಲ್ಲಿ 1,50,501 ಕೋಟಿ ರೂ.ಗೆ 6.5 ರಷ್ಟು ಏರಿಕೆಯಾಗಿದೆ, ಇದು ವರ್ಷದ ಹಿಂದೆ 1,41,346 ಕೋಟಿ ರೂ. ಆಗಿತ್ತು.
ಏಪ್ರಿಲ್-ಆಗಸ್ಟ್ 2024 ರ ಅವಧಿಯಲ್ಲಿ ಒಟ್ಟು ಜಿಎಸ್‌ಟಿ ಆದಾಯವು ಶೇಕಡ 10.1 ರಷ್ಟು ಏರಿಕೆಯಾಗಿ 9,13,855 ಕೋಟಿ ರೂಪಾಯಿಗಳಿಗೆ ತಲುಪಿದೆ. ನಿವ್ವಳ ಜಿಎಸ್‌ಟಿಯು 8,06,475 ಕೋಟಿ ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.10.2ರಷ್ಟು ಏರಿಕೆಯಾಗಿದೆ.
ರಾಜ್ಯವಾರು ಮಹಾರಾಷ್ಟ್ರವು ಅತಿ ಹೆಚ್ಚು 26,367 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದೆ. ಕರ್ನಾಟಕ(12,344 ಕೋಟಿ ರೂ.), ಗುಜರಾತ್(10,344 ಕೋಟಿ ರೂ.), ತಮಿಳುನಾಡು(10,181 ಕೋಟಿ ರೂ.), ಮತ್ತು ಹರಿಯಾಣ(8,623 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ. ಈ ರಾಜ್ಯವಾರು ಸಂಗ್ರಹ ಅಂಕಿ ಅಂಶಗಳು ಸರಕುಗಳ ಆಮದಿನ ಮೇಲೆ GST ಒಳಗೊಂಡಿಲ್ಲ.