alex Certify GST ನಕಲಿ ಬಿಲ್ ಸೃಷ್ಟಿಸಿ 180 ಕೋಟಿ ರೂ. ವಂಚನೆ: ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST ನಕಲಿ ಬಿಲ್ ಸೃಷ್ಟಿಸಿ 180 ಕೋಟಿ ರೂ. ವಂಚನೆ: ಆರೋಪಿ ಅರೆಸ್ಟ್

ಬೆಂಗಳೂರು: ಸರ್ಕಾರಕ್ಕೆ ಸರಕು ಮತ್ತು ಸೇವಾ ತೆರಿಗೆ ಪಾವತಿಸದಿದ್ದರೂ ಪಾವತಿಸಿದ ತೆರಿಗೆ ಹಿಂಪಡೆಯುವ ಸೌಲಭ್ಯ ಬಳಸಿಕೊಂಡು ನಕಲಿ ಬಿಲ್ ಸೃಷ್ಟಿಸಿ 180 ಕೋಟಿ ರೂ. ವಂಚಿಸಿದ್ದ ಪ್ರಕರಣವನ್ನು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ವಂಚನೆ ಪ್ರಕರಣದ ಪ್ರಮುಖ ಸೂತ್ರಧಾರಿ ಆಗಿರುವ ಕೇರಳದ ಮೊಹಮ್ಮದ್ ಸಿದ್ದಿಕ್ ಬಂಧಿತ ವ್ಯಕ್ತಿ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ಜಿಎಸ್‌ಟಿ ಬೋಗಸ್ ನೋಂದಣಿ ಪ್ರಕರಣಗಳು ಪತ್ತೆಯಾಗಿದ್ದು, 1008 ಕೋಟಿ ರೂಪಾಯಿ ಮೊತ್ತದ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಹಲವರ ಖಾತೆಗಳಿಗೆ ತೆರಿಗೆ ಮೊತ್ತ ಮರು ಪಾವತಿ ಮಾಡಲಾಗಿತ್ತು.

ಬೋಗಸ್ ನೋಂದಣಿ ಸಂಖ್ಯೆಗಳ ಆಧರಿಸಿ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಬೃಹತ್ ಪ್ರಮಾಣದಲ್ಲಿ ತೆರಿಗೆ ವಂಚಿಸುತ್ತಿದ್ದ ಪ್ರಕರಣ ಇದಾಗಿದೆ. ವಂಚನೆ ಪ್ರಕರಣ ಪತ್ತೆ ಕಾರ್ಯಾಚರಣೆಯಲ್ಲಿ ರಾಜ್ಯದ 60 ಅಧಿಕಾರಿಗಳು ಭಾಗವಹಿಸಿದ್ದರು. ಕೇರಳ, ತಮಿಳುನಾಡು ಜಿಎಸ್‌ಟಿ ಅಧಿಕಾರಿಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ. ಶಿಖಾ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...