ಅರ್ಧಕ್ಕಿಂತ ಅಧಿಕ ಉತ್ಪನ್ನಗಳ ಸರಕು ಮತ್ತು ಸೇವಾ ತೆರಿಗೆಯನ್ನು ಶೇಕಡಾ 28ರ ಸ್ಲಾಬ್ ಗೆ ವರ್ಗಾಯಿಸಲಾಗುತ್ತದೆ ಅಲ್ಲದೆ 143 ಉತ್ಪನ್ನಗಳ ದರ ಏರಿಸಲಾಗುತ್ತದೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿತ್ತು.
ಆದರೆ ಇದೀಗ ಶುಭಸುದ್ದಿಯೊಂದು ಲಭ್ಯವಾಗಿದ್ದು, ಸರಕು ಮತ್ತು ಸೇವಾ ತೆರಿಗೆ ಸದ್ಯಕ್ಕೆ ಏರಿಕೆಯಾಗುವುದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ಈ ಕುರಿತು ರಾಜ್ಯಗಳಿಂದ ಜಿ.ಎಸ್.ಟಿ. ಕೌನ್ಸಿಲ್ ಯಾವುದೇ ಅಭಿಪ್ರಾಯವನ್ನು ಕೇಳಿಲ್ಲವೆಂದು ಹೇಳಲಾಗಿದೆ.
ಹೀಗಾಗಿ ಯಾವುದೇ ಉತ್ಪನ್ನಗಳ ಸರಕು ಮತ್ತು ಸೇವಾ ತೆರಿಗೆ ಸದ್ಯಕ್ಕೆ ಏರಿಕೆಯಾಗುವುದಿಲ್ಲವೆಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಗಳೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.