ಹೃದಯ ವಿದ್ರಾವಕ ಘಟನೆಯೊಂದರಲ್ಲಿ 40 ವರ್ಷದ ಬಸ್ ಚಾಲಕ ಎದೆನೋವಿನಲ್ಲೇ 15 ಕಿಲೋಮೀಟರ್ ಬಸ್ ಚಲಿಸಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಜಿಎಸ್ಆರ್ಟಿಸಿ) ಚಾಲಕ ಭರ್ಮಲ್ ಅಹಿರ್ ಗುಜರಾತ್ನ ರಾಧನ್ಪುರದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಚಾಲಕ ಎದೆನೋವು ಸಹಿಸಿಕೊಂಡು ಬಸ್ಸನ್ನು 15 ಕಿ.ಮೀ ಓಡಿಸುತ್ತಲೇ ಡಿಪೋ ತಲುಪುವಷ್ಟರಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ.
ಅಹಿರ್ನನ್ನು ರಾಧನ್ಪುರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದರು.
ಅಹಿರ್ ಅವರು ಎದೆನೋವು ಮತ್ತು ಅಸ್ವಸ್ಥತೆಯನ್ನು ನಿರ್ಲಕ್ಷಿಸಲು ನಿರ್ಧರಿಸಿ 20 ನಿಮಿಷಗಳ ಕಾಲ ವಾಹನ ಚಲಾಯಿಸಿದರು. ಏಕೆಂದರೆ ಅವರು ತಮ್ಮ ಪ್ರಯಾಣಿಕರನ್ನು ಹೆದ್ದಾರಿಯಲ್ಲೇ ಬಿಟ್ಟು ಹೋಗಲು ಬಯಸಲಿಲ್ಲ ಎಂದು ಬಸ್ ಕಂಡಕ್ಟರ್ ಮಾಹಿತಿ ನೀಡಿದರು.
ಬಸ್ ಸುಮಾರು 15 ನಿಮಿಷ ತಡವಾಗಿ ಡಿಪೋ ತಲುಪಿದಾಗ, ಪಾರ್ಕಿಂಗ್ ಮಾಡಿದ ನಂತರ ಭರ್ಮಲ್ ಅಹಿರ್ ತಮ್ಮ ಸೀಟಿನ ಮೇಲೇ ಕುಸಿದಿದ್ದರು.