ಶಿವಮೊಗ್ಗ: ಪಡಿತರ ಚೀಟಿ ತಿದ್ದುಪಡಿ ಮಾಡಿಕೊಂಡವರಿಗೆ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲು ಸಮಸ್ಯೆ ಎದುರಾಗಿದೆ.
ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಹೆಸರು ಬದಲಾವಣೆ ಮಾಡಿಸಿಕೊಂಡವರು, ಮೃತರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಸಿದವರು ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಸಲು ಅರ್ಜಿ ಸ್ವೀಕೃತವಾಗುತ್ತಿಲ್ಲ ಎನ್ನಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಗೆ ಪ್ರಮುಖ ದಾಖಲೆಯಾಗಿದ್ದು, ಕುಟುಂಬದ ಯಜಮಾನಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಆಗಲು ಸಾಧ್ಯವಿದೆ. ಕಳೆದ ಒಂದು ತಿಂಗಳಿಂದ ಅನೇಕ ಪಡಿತರ ಚೀಟಿಗಳು ತಿದ್ದುಪಡಿಯಾಗಿದ್ದು, ಈ ರೀತಿ ತಿದ್ದುಪಡಿ ಆದ ಪಡಿತರ ಚೀಟಿಗಳು ಜಿಲ್ಲಾವಾರು ನೀಡಿರುವ ಅಂಕಿ ಸಂಖ್ಯೆಗಳಲ್ಲಿ ತಿದ್ದುಪಡಿ ಆಗದ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ವೀಕೃತವಾಗುತ್ತಿಲ್ಲ ಎಂದು ಹೇಳಲಾಗಿದೆ.
ಆಹಾರ ಮತ್ತು ನಾಗರಿಕ ಸಭಾ ಸರಬರಾಜು ಇಲಾಖೆ ನೀಡಿದ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ನೋಂದಣಿ ಮಾಡಲಾಗುತ್ತಿದೆ. ಪಡಿತರ ಚೀಟಿ ತಿದ್ದುಪಡಿ ಆದವರ ಅಂಕಿ ಸಂಖ್ಯೆಗಳನ್ನು ಎರಡನೇ ಹಂತದಲ್ಲಿ ಪಡೆದು ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.