ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಅರ್ಜಿ ನೋಂದಣಿಗೆ ಸಂಬಂಧಿತ ನೋಂದಣಿ ಮತ್ತು ಮುದ್ರಣ ಸೇವಾ ಶುಲ್ಕ 4.36 ಕೋಟಿ ರೂ.ಗಳನ್ನು ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಬಿಡುಗಡೆ ಮಾಡಿದೆ.
ಯೋಜನೆಯ ನೋಂದಣಿ ಆರಂಭದ ದಿನಗಳಲ್ಲಿ ಫಲಾನುಭವಿಗಳಿಗೆ ಗೊಂದಲ ಉಂಟಾಗಿದ್ದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗ್ರಾಮ ಪಂಚಾಯಿತಿ ಮಟ್ಟದ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ನೋಂದಣಿಗೆ ಸೂಚಿಸಿತ್ತು.
ಅಲ್ಲದೇ, ಸೇವಾ ಶುಲ್ಕ ನೀಡುವ ಭರವಸೆ ನೀಡಲಾಗಿತ್ತು. ಜುಲೈ 20, 2023 ರಿಂದ ಸೆಪ್ಟೆಂಬರ್ 13ರವರೆಗೆ 30,84,441 ಫಲಾನುಭವಿಗಳು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಸಿಕೊಂಡಿದ್ದಾರೆ. ಅದರ ಆಧಾರದ ಮೇಲೆ ಪ್ರತಿ ಅರ್ಜಿಗೆ 12 ರೂಪಾಯಿಯಂತೆ 5951 ಗ್ರಾಮ ಪಂಚಾಯಿತಿಗಳಿಗೆ 4,36,75,685 ರೂ. ಬಿಡುಗಡೆ ಮಾಡಲಾಗಿದೆ.