ಮಡಿಕೇರಿ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಈಗಾಗಲೇ ಅರ್ಜಿ ಸಲ್ಲಿಸಿ ಕೆಲವು ಫಲಾನುಭವಿಗಳ ಖಾತೆಗೆ ಇನ್ನೂ 2 ಸಾವಿರ ರೂ. ಮೊತ್ತ ಖಾತೆಗೆ ಜಮೆಯಾಗಿರುವುದಿಲ್ಲ.
ಅಂತಹ ಫಲಾನುಭವಿಗಳು ತಮ್ಮ ಖಾತೆ ಹೊಂದಿದ ಬ್ಯಾಂಕ್ ಗೆ ತೆರಳಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದು, ರೇಷನ್ ಕಾರ್ಡ್ಗೆ ಇ-ಕೆವೈಸಿ ಮಾಡಿಸುವುದು, ಬ್ಯಾಂಕ್ ಖಾತೆಗೆ ಎನ್ಪಿಸಿಐ ಮಾಡಿಸಿ ಮಾಹಿತಿಯನ್ನು ಜೋಡಣೆ ಮಾಡಿದ ಪ್ರತಿಯನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ರಸ್ತೆ, ಚೈನ್ ಗೇಟ್ ಹತ್ತಿರ, ಮಡಿಕೇರಿ ಇಲ್ಲಿಗೆ ತಲುಪಿಸುವಂತೆ ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ಕೋರಿದ್ದಾರೆ.