ದಾವಣಗೆರೆ: ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಯೋಜನೆ ಜಾರಿಯಾದ ಒಂದು ತಿಂಗಳ ಒಳಗೆ ಒಂದು ಕೋಟಿಗೂ ಅಧಿಕ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗಿದೆ. ಇದುವರೆಗೆ 1.17 ಕೋಟಿ ಮಹಿಳೆಯರ ಖಾತೆಗೆ ಯೋಜನೆಯ ಹಣ ತಲುಪಿಸಲಾಗಿದೆ. ಜನವರಿ 5ರ ನಂತರ ಮತ್ತೆ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಣ್ಣ ಪುಟ್ಟ ವ್ಯತ್ಯಾಸಗಳು, ಅರ್ಜಿಗಳ ನ್ಯೂನ್ಯತೆ ಸೇರಿ ಹಲವು ಸಮಸ್ಯೆ ಇದೆ. ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಸುಮಾರು ಒಂದುವರೆಯಿಂದ ಎರಡು ಲಕ್ಷ ಮಂದಿಗೆ ಮಾತ್ರ ಹಣ ಸಂದಾಯವಾಗಿಲ್ಲ. ಇದುವರೆಗೂ 1.17 ಕೋಟಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು, ಜನವರಿ 5 ರಿಂದ ಡಿಸೆಂಬರ್ ತಿಂಗಳ ಹಣವನ್ನು ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.