ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಒಟ್ಟಿಗೆ ಎರಡು ತಿಂಗಳ ಹಣ ಖಾತೆಗೆ ಜಮಾ ಆಗಲಿದ್ದು, ಹಬ್ಬದ ಖರ್ಚಿಗೆ ಆಗಬಹುದು ಎಂದುಕೊಂಡಿದ್ದ ಗೃಹಿಣಿಯರು ಗೃಹಲಕ್ಷ್ಮಿ ಹಣಕ್ಕಾಗಿ ಎದುರು ನೋಡುತ್ತಿದ್ದಾರೆ.
ಅನೇಕರು ಬ್ಯಾಂಕ್, ಅಂಚೆ ಕಚೇರಿಗಳಿಗೆ ತೆರಳಿ ಹಣ ಬಂದಿದೆಯಾ ಎಂದು ಕೇಳುತ್ತಿದ್ದಾರೆ. ಜುಲೈ ಮುಗಿದು ಆಗಸ್ಟ್ ಕೂಡ ಮುಗಿದು ಸೆಪ್ಟೆಂಬರ್ ತಿಂಗಳು ಅಂತ್ಯವಾಗುತ್ತಾ ಬಂದರೂ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಪಾವತಿ ಆಗಿಲ್ಲ. ಇದರಿಂದಾಗಿ, ಸಂಕಷ್ಟ ಎದುರಿಸುತ್ತಿರುವ ಗೃಹಿಣಿಯರು ಕೂಡಲೇ ಖಾತೆಗೆ ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿ ತಿಂಗಳು ಸುಮಾರು 2500 ಕೋಟಿ ರೂಪಾಯಿ ಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೂರು ತಿಂಗಳ ಅನುದಾನ ಬಿಡುಗಡೆಗಾಗಿ ಹಣಕಾಸು ಇಲಾಖೆ ಪತ್ರ ಬರೆಯಲಾಗಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಖಾತೆಗೆ ಹಣ ಬರುತ್ತೆ ಎಂದುಕೊಂಡಿದ್ದ ಗೃಹಲಕ್ಷ್ಮಿಯರಿಗೆ ಶಾಕ್ ಆಗಿದೆ.
ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಮೂರು ತಿಂಗಳ ಕಂತಿನ ಹಣ ಕೇಳಲಾಗಿದ್ದು ಒಂದೊಂದೇ ತಿಂಗಳ ಹಣವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎನ್ನಲಾಗಿದೆ.