ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ಯಶಸ್ಸು ಸಾಧಿಸಿದ್ದು, ಆಗಸ್ಟ್ ನಲ್ಲಿ ಶೂನ್ಯ ಕರೆಂಟ್ ಬಿಲ್ ಬಂದ ಬೆನ್ನಲ್ಲೇ 15 ದಿನದಲ್ಲೇ ಮತ್ತೆ 11 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಜುಲೈ ತಿಂಗಳಿನಿಂದ ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ನೀಡಿತ್ತು. ಜುಲೈ ನಲ್ಲಿ ಅರ್ಜಿ ಸಲ್ಲಿಸಿದವರಿಗೆ 200 ಯೂನಿಟ್ವರೆಗೂ ಉಚಿತ ವಿದ್ಯುತ್ ಯೋಜನೆಯಡಿ ಆಗಸ್ಟ್ 01 ರಿಂದ ಶೂನ್ಯ ಬಿಲ್ಗಳನ್ನು ಗ್ರಾಹಕರಿಗೆ ವಿದ್ಯುತ್ ನಿಗಮಗಳು ನೀಡುತ್ತಿವೆ.
ಶೂನ್ಯ ವಿದ್ಯುತ್ ಬಿಲ್ ಬಂದ ಬೆನ್ನಲ್ಲೇ ಗೃಹಜ್ಯೋತಿ ಯೋಜನೆಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಜನರು ಮುಗಿಬಿದ್ದಿದ್ದು, 15 ದಿನಗಳಲ್ಲಿ 11 ಲಕ್ಷ ಗ್ರಾಹಕರು ಉಚಿತ ವಿದ್ಯುತ್ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.