ಬೆಂಗಳೂರು : ರಾಜ್ಯ ಸರ್ಕಾರ(State Government) ದ ಮಹತ್ವದ ಯೋಜನೆಯಲ್ಲಿ ಒಂದಾದ ಗೃಹಜ್ಯೋತಿ ಯೋಜನೆ(GruhaJyothi Scheme) ಗೆ ನಾಳೆಯಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಬಾಡಿಗೆದಾರು ಮತ್ತು ಇತರೆ ಗ್ರಾಹಕರು ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು (Aadhaar Number) ಸೇವಾ ಸಿಂಧು ಪೋರ್ಟಲ್ (Seva Sindhu Portal) ನಲ್ಲಿ ಜೋಡಣೆ ಮಾಡಿದ್ರೆ ಸಾಕು ಎಂದು ಇಂಧನ ಇಲಾಖೆ ತಿಳಿಸಿದೆ.
ತಾಂತ್ರಿಕ ದೋಷ ಹಿನ್ನೆಲೆ ಜೂನ್ 18 ಕ್ಕೆ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ನಾಳೆಯಿಂದ ರಾಜ್ಯದ ಜನರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಮಾಸಿಕ 200 ಯೂನಿಟ್ ಒಳಗಿನ ವಿದ್ಯುತ್ ಬಳಕೆ ಮಾಡುವವರು ಅರ್ಜಿ ಸಲ್ಲಿಸಬಹುದಾಗಿದೆ.ರಾಜ್ಯದಲ್ಲಿ 2.14 ಕೋಟಿ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ. ಅರ್ಜಿ ಸಲ್ಲಿಸುವವರು ಆರ್ ಆರ್ ನಂಬರ್ ಜೊತೆ ಆಧಾರ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು.
ಗೃಹಜ್ಯೋತಿ ಯೋಜನೆಯಡಿ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಇದು ಸ್ವಂತ ಮನೆ ಹಾಗೂ ಬಾಡಿಗೆದಾರರಿಗೂ ಅನ್ವಯವಾಗಲಿದ್ದು, ಫ್ರೀ ವಿದ್ಯುತ್ ಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದರು. ಗೃಹಜ್ಯೋತಿ ಯೋಜನೆ ಹೆಸರಿನಲ್ಲಿಯೇ ಬೆಸ್ಕಾಂ ಹೆಡ್ ಆಫೀಸ್ ನಲ್ಲಿ ಆಪ್ ಸಿದ್ಧವಾಗುತ್ತಿದೆ. ಸ್ಮಾರ್ಟ್ ಫೋನ್ ಗಳಲ್ಲಿಯೂ ಗೃಹಜ್ಯೋತಿ ಆಪ್ ಲಭ್ಯವಾಗಲಿದೆ ಎಂದು ಹೇಳಿದ್ದರು.