ಬೆಂಗಳೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ನೋಂದಾಯಿಸಿಕೊಳ್ಳಲು ಸೇವಾಸಿಂಧು ವೆಬ್ಸೈಟಿನಲ್ಲಿ ತಾಂತ್ರಿಕ ಸಮಸ್ಯೆ ಆಗುತ್ತಿರುವುದರಿಂದ ರಾಜ್ಯಾದ್ಯಂತ 2000 ಕೇಂದ್ರಗ ಳಲ್ಲಿ ಗುರುವಾರದಿಂದ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹೌದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಎದ್ಯುಚ್ಛಕ್ತಿ ಕಚೇರಿಗಳು ಗ್ರಾ.ಪಂ.ಗಳು ಹಾಗೂ ನಾಡಕಚೇರಿಗಳಲ್ಲಿ ನೋಂದಣಿ ಮಾಡಲಾಗುತ್ತದೆ. ಈ ಕೇಂದ್ರಗಳಲ್ಲಿ ನೋಂದಣಿಗೆ ಹೊಸ – ಲಿಂಕ್ ಕೂಡ ನೀಡಲಾಗಿದೆ. ಸೇವಾಸಿಂಧು ಸರ್ವರ್ ಮೇಲೆ ಬೀಳುತ್ತಿರುವ ಹೊರೆ ನಿವಾರಿಸಲು ಇಂಧನ ಇಲಾಖೆ ಗುರುವಾರದಿಂದ 2000 ಸೇವಾಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ನೀಡಲು ನಿರ್ಧರಿಸಿದೆ.ಪ್ರಸ್ತುತ ನೋಂದಣಿ ಕೇಂದ್ರಗಳಿಗೆ ಮಾತ್ರ ಹೊಸ ಲಿಂಕ್ ನೀಡಲಾಗುತ್ತದೆ. ಹೊಸ ಲಿಂಕ್ ಹೇಗೆ ಕಾರ ನಿರ್ವಹಿಸುತ್ತಿದೆ ಎಂದು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ.
ಮಾಸಿಕ 200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ ಅರ್ಹ ಗೃಹಬಳಕೆ ವಿದ್ಯುತ್ https://sevasindhugs.karnat aka.gov.in ವೆಬ್ ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಜತೆಗೆ ಬೆಂಗಳೂರು ಒನ್, ಗ್ರಾಮ ಕರ್ನಾಟಕ ಒನ್ ಕೇಂದ್ರ, ನಾಡಕಚೇರಿ, ಎಲ್ಲ ವಿದ್ಯುತ್ ಕಚೇರಿಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.ರಾಜ್ಯದಲ್ಲಿ ಗೃಹಜ್ಯೋತಿಗೆ ನೊಂದಣಿ ಪ್ರಕ್ರಿಯೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಬುಧವಾರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಸಂಜೆ ವೇಳೆಗೆ ಬರೋಬ್ಬರಿ 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಹೌದು, ಮೊದಲ ದಿನ 96.305, ಎರಡನೆಯ ದಿನ 3,34,845 , ಮೂರನೇ ದಿನ 4,64,225 ಹಾಗೂ ಬುಧವಾರ 3.56 ಲಕ್ಷ ಗ್ರಾಹಕರು ನೊಂದಣಿ ಮಾಡಿಕೊಂಡಿದ್ದಾರೆ. ಜೂನ್ 18 ರಿಂದ ಆರಂಭಗೊಂಡ ಗೃಹಜ್ಯೋತಿ ನೊಂದಣಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಆಯ್ದ ಎಸ್ಕಾಂ ಕಚೇರಿಗಳಲ್ಲಿ, ಲ್ಯಾಪ್ಟಾಪ್, ಮೊಬೈಲ್, ಕಂಪ್ಯೂಟರ್ ನಲ್ಲಿಯೂ ಸಾರ್ವಜನಿಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಸರಳವಾಗಿದ್ದು, ಸೇವಾ ಸಿಂಧು ಪೋರ್ಟಲ್ ನಲ್ಲಿ ಆಧಾರ್, ಮೊಬೈಲ್ ಸಂಖ್ಯೆ ಹಾಗೂ ಖಾತೆ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿಗೆ ಕೊನೆ ದಿನ ಇರುವುದಿಲ್ಲ ಎನ್ನಲಾಗಿದೆ.