ಬೆಂಗಳೂರು : ರಾಜ್ಯದಲ್ಲಿ ಗೃಹಜ್ಯೋತಿಗೆ ನೊಂದಣಿ ಪ್ರಕ್ರಿಯೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಬುಧವಾರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಸಂಜೆ ವೇಳೆಗೆ ಬರೋಬ್ಬರಿ 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಮೊದಲ ದಿನ 96.305, ಎರಡನೆಯ ದಿನ 3,34,845 , ಮೂರನೇ ದಿನ 4,64,225 ಹಾಗೂ ಬುಧವಾರ 3.56 ಲಕ್ಷ ಗ್ರಾಹಕರು ನೊಂದಣಿ ಮಾಡಿಕೊಂಡಿದ್ದಾರೆ. ಜೂನ್ 18 ರಿಂದ ಆರಂಭಗೊಂಡ ಗೃಹಜ್ಯೋತಿ ನೊಂದಣಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಹೊಸ ಲಿಂಕ್ ಪರಿಚಯ ಮಾಡಿದೆ. ಒಂದೇ ಒಂದು ನಿಮಿಷದಲ್ಲಿ ಗ್ರಾಹಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಸೇವಾ ಸಿಂಧು ಪೋರ್ಟಲ್ ನಡಿಯಲ್ಲಿ ವಿದ್ಯುತ್ ಗ್ರಾಹಕರು ಗೃಹ ಜ್ಯೋತಿಯೋಜನೆಗೆ ನೋಂದಣಿ ಮಾಡಲು ಪ್ರತ್ಯೇ ಕ ಲಿಂಕ್ ಅನ್ನು ರಿಲೀಸ್ ಮಾಡಿದೆ.ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು https://sevasindhugs.karnataka.gov.in/gruhajyothi/renderApplicationForm.do?serviceId=19890005&UUID=5ffe9585-600b-44c2-b45f 4536f55a4d74&directService=true&tempId=8410&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=MQLF-BVL8-LJGM-3BHN-TFIY-S2AL-VH8S-Q24Q ಈ ಲಿಂಕ್ ಕ್ಲಿಕ್ ಮಾಡಿದ್ರೇ, ನೇರವಾಗಿ ಅರ್ಜಿಸಲ್ಲಿಸಲು ಅರ್ಜಿ ತೆರೆದುಕೊಳ್ಳಲಿದೆ. ಅಥವಾ https://sevasindhugs.karnataka.gov.in/about_kannada.html# ಲಿಂಕ್ ಕೂಡ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಆಯ್ದ ಎಸ್ಕಾಂ ಕಚೇರಿಗಳಲ್ಲಿ, ಲ್ಯಾಪ್ಟಾಪ್, ಮೊಬೈಲ್, ಕಂಪ್ಯೂಟರ್ ನಲ್ಲಿಯೂ ಸಾರ್ವಜನಿಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಸರಳವಾಗಿದ್ದು, ಸೇವಾ ಸಿಂಧು ಪೋರ್ಟಲ್ ನಲ್ಲಿ ಆಧಾರ್, ಮೊಬೈಲ್ ಸಂಖ್ಯೆ ಹಾಗೂ ಖಾತೆ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿಗೆ ಕೊನೆ ದಿನ ಇರುವುದಿಲ್ಲ ಎನ್ನಲಾಗಿದೆ.