ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರ ಖಾತೆಗೆ ಮಾಸಿಕ 2,000 ರೂ. ಜಮಾ ಮಾಡಲಾಗುತ್ತಿದ್ದು, ಈಗಾಗಲೇ ಮೊದಲ ಕಂತಿನ ಹಣ ಜಮಾ ಆಗಿದೆ. ಇದೀಗ 2ನೇ ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರ ಸಜ್ಜಾಗಿದೆ.
ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಈ ವಾರದಲ್ಲಿಯೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಶೀಘ್ರವೇ ಯಜಮಾನಿಯರ ಖಾತೆಗೆ ಗೃಹಲಕ್ಷ್ಮಿಯ 2ನೇ ಕಂತಿನ ಹಣ ಯಜಮಾನಿಯರ ಖಾತೆಗೆ ಜಮಾ ಆಗಲಿದೆ.
ತಡವಾಗಿ ನೋಂದಣಿಯಾದ ಮಹಿಳೆಯರಿಗೂ ದಾಖಲೆಗಳು ಸರಿಯಾಗಿದ್ದರೆ ಎರಡನೇ ಕಂತಿನ ಹಣ ವಾರದೊಳಗೆ ಜಮೆಯಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲನೇ ಕಂತಿನಲ್ಲಿ ಫಲಾನುಭವಿಗಳಿಗೆ ಖಾತೆಗೆ ಜಮಾ ಆಗಿತ್ತು. ಆದರೆ ಅರ್ಜಿ ಸಲ್ಲಿಕೆ ವೇಳೆ ಆದ ಸಮಸ್ಯೆಯಿಂದ ಹಣ ಬಾರದ ಮಹಿಳೆಯರು ಅರ್ಜಿ ಸಲ್ಲಿಕೆಯಾಗಿದ್ದರೆ ಈ ಬಾರಿ ಅವರಿಗೆ ಎರಡೂ ಕಂತಿನ ಹಣ ಒಟ್ಟಿಗೆ ಜಮಾ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೊದಲ ತಿಂಗಳ ಹಣ ಕಳೆದ ತಿಂಗಳು ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಎರಡನೇ ತಿಂಗಳ ಮಾಸಿಕ 2ಸಾವಿರ ರೂ.ಅನುದಾನ ನೋಂದಣಿಯಾದ ಫಲಾನುಭವಿಗಳಿಗೆ ವಾರದೊಳಗೆ ಬಿಡುಗಡೆಯಾಗಲಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳ ಡಿಬಿಟಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಹ ಮಹಿಳೆಯರ ಖಾತೆಗೂ ಹಣ ಜಮೆಯಾಗಲಿದೆ. ಉಳಿದವರ ಡಿಬಿಟಿ ಪ್ರಕ್ರಿಯೆ ನಡೆಯುತ್ತಿದ್ದು, ವಾರದೊಳಗೆ ಎರಡನೇ ತಿಂಗಳ ಹಣ ಆಯಾ ಮಹಿಳೆಯರ ಖಾತೆಗೆ ಪೂರ್ಣವಾಗಿ ಜಮೆಯಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.