ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಜಮಾ ಆಗಿಲ್ಲ.
ಈಗಾಗಲೇ ಸರ್ಕಾರ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗದೇ ಇರುವುದಕ್ಕೆ ಹಲವು ಕಾರಣಗಳನ್ನು ಕೂಡ ನೀಡಿತ್ತು ಸರ್ಕಾರದ ಕಡೆಯಿಂದಲೂ ಹಣ ವರ್ಗಾವಣೆ ಆಗದೆ ಇರುವುದಕ್ಕೆ ತಾಂತ್ರಿಕ ದೋಷಗಳು ಕಾರಣವಾಗಿದೆ.
ಹಲವು ಮಹಿಳೆಯರು ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು , ಆದರೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿಲ್ಲ . ಸರ್ಕಾರ ತಿಳಿಸಿರುವಂತೆ ಇನ್ನು ಮುಂದೆ ಆಧಾರ್ ಸೀಡಿಂಗ್ ಆಗದೆ ಇದ್ದರೂ ಕೂಡ ಅಂತಹ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ.
ಹೌದು, ರಾಜ್ಯದಲ್ಲಿ ಸುಮಾರು 33 ಐಪಿಪಿಬಿ (India Post payment) ಶಾಖೆಗಳಿದ್ದು, ಹಾಗಾಗಿ ಇಲ್ಲಿ ಖಾತೆ ತೆರೆದರೆ ಗೃಹಲಕ್ಷ್ಮಿ ಯೋಜನೆಯ ಹಣ ಬಹಳ ಬೇಗ ಮಹಿಳೆಯರ ಖಾತೆ ತಲುಪುತ್ತದೆ. ಪೋಸ್ಟ್ ಆಫೀಸ್ ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ ಹಲವು ಮಹಿಳೆಯರಿಗೆ ಜಮಾ ಆಗಿದೆಯಂತೆ. ಹಾಗಾಗಿ ಮಹಿಳೆಯರಿಗೆ ಪೋಸ್ಟ್ ಆಫೀಸ್ ನಲ್ಲಿ ಅಕೌಂಟ್ ಮಾಡಿಸಲು ಸೂಚನೆ ನೀಡಲಾಗಿದೆ.
ಮುಂದಿನ 15 ದಿನದೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುವುದು. 1902 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಹಿಳೆಯರು ಮಾಹಿತಿ ಪಡೆದುಕೊಳ್ಳಬಹುದು. ತಾಂತ್ರಿಕ ಕಾರಣದಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಈ ಬಗ್ಗೆ ಮಾಹಿತಿ ಪಡೆದಿದ್ದು, ಇನ್ನೂ 15 ದಿನದೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಸುವುದಾಗಿ ಹೇಳಿದ್ದಾರೆ.