ಕಾಂಗ್ರೆಸ್ ಸರ್ಕಾರದ ಮಹತ್ವದ ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ 2 ನೇ ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಇ-ಕೆವೈಸಿ ಅಪ್ಡೇಟ್ ಮಾಡಿಸಲು ಸೂಚನೆ ನೀಡಲಾಗಿದೆ.ಯೋಜನೆಯಡಿ ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಆಗಸ್ಟ್ – 2023 ರಿಂದ ಮಾಹೆಯಾನ 2000 ರೂ.ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ.
ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಂತ ಈ ರೀತಿ ಪರಿಶೀಲಿಸಿಕೊಳ್ಳಿ..
ಗೃಹಲಕ್ಷ್ಮಿ ಮೊತ್ತವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://ahara.kar.nic.in/
ನೀವು ಈಗ ಮುಖ್ಯ ಪುಟದಲ್ಲಿ ಮೊತ್ತ ಸ್ಥಿತಿ ಆಯ್ಕೆಗೆ ಹೋಗಬೇಕು.
ನಂತರ ನೀವು ನಿಮ್ಮ ಪಡಿತರ ಚೀಟಿಯಲ್ಲಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಗೃಹಲಕ್ಷ್ಮಿ ಮೊತ್ತದ ಸಂಪೂರ್ಣ ಮಾಹಿತಿ ಈಗ ನಿಮ್ಮ ಮುಂದೆ ಕಾಣಿಸುತ್ತದೆ. ನೀವು ಇದನ್ನು ತ್ವರಿತವಾಗಿ ಪರಿಶೀಲಿಸಬಹುದು.
ಹಣ ಜಮೆ ಆಗಿರುವ ಕುರಿತಂತೆ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಸಂದೇಶ ಬಂದಿದ್ದು, ಸಂದೇಶ ಬಂದವರ ಖಾತೆಗೆ ರಾಜ್ಯ ಸರ್ಕಾರದಿಂದ ಅರ್ಹ ಫಲಾನುಭವಿ ಯಜಮಾನಿ ಮಹಿಳೆಯರ ಜಮಾ ಮಾಡಲಾಗಿದೆ. ಹಣ ಬಾರದೇ ಇದ್ದವರು ನಿಮ್ಮ ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಹಾಗೂ https://sevasindhugs.karnataka.gov.in/ ಲಿಂಕ್ ಮೂಲಕ. ಮುಖಪುಟದಲ್ಲಿ ಗ್ಯಾರಂಟಿ ಯೋಜನೆಗಳ ಹಲವು ಆಪ್ಷನ್ ಇರುತ್ತದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಸೆಲೆಕ್ಟ್ ಮಾಡಿ, ರೇಷನ್ ಕಾರ್ಡ್ ಸಂಖ್ಯೆಯನ್ನು ಕೇಳಲಾಗುತ್ತದೆ. RD ನಂಬರ್ ಹಾಕಿ ಸಬ್ಮಿಟ್ ನೀಡಿದರೆ ರೇಷನ್ ಕಾರ್ಡ್ ನಂಬರ್ ಫಲಾನುಭವಿಯ ಹೆಸರು ಅರ್ಜಿ ಸ್ಥಿತಿಯ ಸಂಪೂರ್ಣ ಮಾಹಿತಿ ಬರುತ್ತದೆ. ಈ ಮೂಲಕ ನೀವು ತಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಬಹುದು.